ತಹಸೀಲ್ದಾರ ರಾಣೆ ಸೇವಾ ನಿವೃತ್ತಿ


ಹುಬ್ಬಳ್ಳಿ, ಜೂ.2: ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರರಾಗಿದ್ದ ಶಿವಾನಂದ ರಾಣೆ ಅವರು ಸೇವಾ ನಿವೃತ್ತಿ ಹೊಂದಿದ್ದರಿಂದ ತಹಸೀಲ್ದಾರ್ ಕಚೇರಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಪ್ರಕಾಶ್ ನಾಶಿ ಅವರು ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ರಾಗಿ ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ್ ಕಂದಕೂರ್, ಅಪರ ತಹಸೀಲ್ದಾರರಾದ ಶಿವಾನಂದ ಹೆಬ್ಬಳ್ಳಿ, ಜಿ. ವಿ ಪಾಟೀಲ್, ಶಿರಸ್ತೇದಾರರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.