ತಹಸೀಲ್ದಾರ ಬಿಜೆಪಿ ಎಜಂಟ ಆಗಿ ಕೆಲಸ ಮಾಡುತ್ತಿದ್ದಾರೆ, ಶಾಸಕ ಸಲಗರ ಸದಸ್ಯರನ್ನು ಹೆದರಿಸುತ್ತಿದ್ದಾರೆ: ಈಶ್ವರ ಖಂಡ್ರೆ

ಬಸವಕಲ್ಯಾಣ: ಡಿ.9:ಜವಬ್ದಾರಿಯುತ ಸ್ಥಾನದಲ್ಲಿರುವ ತಾಲ್ಲೂಕು ದಂಡಾಧಿಕಾರಿಯು ಆಗಿರುವ ತಹಸೀಲ್ದಾರ ಅವರು ಪ್ರಜಾ ಪ್ರಭುತ್ವದ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಶಾಸಕ ಶರಣು ಸಲಗರ ಗ್ರಾಮ ಪಂಚಾಯತ ಸದಸ್ಯರಿಗೆ ಹೆದರಿಸಿ ಬೆದರಿಸಿ ಬಿಜೆಪಿಗೆ ಮತ ನೀಡಲು ಒತ್ತಾಯಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ. ನಗರದ ಶಾಹಿನ ಫಂಗಶನ ಹಾಲನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲ್ಲೂಕು ಮೇಜೆಸ್ಟ್ರೇಟ್ ಜವಬ್ದಾರಿಯುತ ಹುದ್ದೆಯಾಗಿದ್ದು, ಅದರ ವ್ಯಾಪ್ತಿಯನ್ನು ಮೀರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಇಲ್ಲವಾದ್ದಲ್ಲಿ ಪರಿಣಾಮ ನೆಟ್ಟಿಗಿರೊಲ್ಲ ಎಂದು ಗದರಿಸುತ್ತಿದ್ದಾರೆ. ಕಾರ್ಯಾಂಗ ಮತ್ತು ಪ್ರಜಾಪ್ರಭುತ್ವದ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಅಲ್ಲದೆ ಕೆಲ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಹ ಗುಂಡಾಗಿರಿಗೆ ಇಳಿದ್ದಿದ್ದಾರೆ ಎಂದು ದೂರಿದರು.
ಶಾಸಕ ರಾಜಶೇಖರ ಪಾಟೀಲ ಮಾತನಾಡಿ ಬಸವಕಲ್ಯಾಣದ ಶಾಸಕರು ಗುಂಡಾಗಿರಿ ಮಾಡಿ ಗ್ರಾಮ ಪಂಚಾಯತ ಸದಸ್ಯರಿಗೆ ಹೆದರಿಸುತ್ತಿದ್ದಾರೆ. ಅವರ ಗುಂಡಾ ರಾಜಕೀಯ ಇಲ್ಲಿ ನಡೆಯುವುದಿಲ್ಲ. ಮುಂದಿನ ದಿನಗಳಲ್ಲಿ ಜನರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿರುಗೆಟ್ಟು ನೀಡಿದರು. ಯಾವುದೇ ರೀತಿಯ ಭಯ ಪಡೆದ ನಿಷ್ಪಕ್ಷಪಾತವಾಗಿ ತಮ್ಮ ಹಕ್ಕು ಚಲಾಯಿಸಬೇಕು ಎಂದು ಗ್ರಾಮ ಪಂಚಾಯ ಪ್ರತಿನಿಧಿಗಳಿಗೆ ಅಭಯ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಎಂಎಲ್‍ಸಿ ವಿಜಯಸಿಂಗ್, ತಾಲ್ಲೂಕ ಅಧ್ಯಕ್ಷ ನಿಲಖಂಠ ರಾಠೋಡ, ಶ್ರೀಮತಿ ಮಾಲಾ ಬಿ. ನಾರಾಯಣ, ಅಜರಅಲಿ ನೌರಂಗ, ಶಿವಶರಣ ಬಿರಾದಾರ, ಶಿವರಾಜ ನರಶೆಟ್ಟಿ, ಶೇಶಿಕಾಂತ ದುರ್ಗೆ ಸೇರಿದಂತ್ತೆ ಮತ್ತಿತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.