ತಹಸೀಲ್ದಾರ ಕಚೇರಿಯಲ್ಲಿ ಬಸವ ಜಯಂತಿ ಆಚರಣೆ

ಔರಾದ :ಎ.23: ಮಹಾ ಮಾನವತಾವಾದಿ ವಿಶ್ವಗುರ ಬಸವಣ್ಣನವರ 890ನೇ ಜಯಂತಿಯನ್ನು ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತದ ವತಿಯಿಂದ ಸರಳವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ತಹಸಿಲ್ದಾರ್ ಮಲ್ಲಿಕಾರ್ಜುನ, ಗ್ರೇಡ್ 2 ತಹಸೀಲ್ದಾರ ಮಲಶೆಟ್ಟಿ ಚಿದ್ರೆ, ಹಿರಿಯರಾದ ಬಸವರಾಜ ದೇಶಮುಖ, ರವೀಂದ್ರ ಮೀಸೆ, ಶರಣಪ್ಪ ಪಂಚಾಕ್ಷರಿ, ಅಮರ ಎಡವೆ, ಪ್ರಕಾಶ ಘೂಳೆ, ಧನರಾಜ ರಾಗಾ, ವೀರೇಶ ಅಲ್ಮಾಜೆ, ಶರಣಪ್ಪ ಪಾಟೀಲ , ವಿರೇಂದ್ರ ಮೀಸೆ, ಸಚಿನ ಎಡವೆ, ಆನಂದ ದ್ಯಾಡೆ ಸೇರಿದಂತೆ ಕರವೇ ಕಾರ್ಯಕರ್ತರು ಬಸವ ಅಭಿಮಾನಿಗಳು ಉಪಸ್ಥಿತರಿದ್ದರು.