ತಹಸೀಲ್ದಾರ ಕಚೇರಿಯಲ್ಲಿ ಜಯಂತಿ ಆಚರಣೆ

ಹುಣಸಗಿ : ಜ.21:ಪಟ್ಟಣದ ತಹಸೀಲ್ದಾರ ಕಚೇರಿಯ ಆವರಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ, ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಅದ್ದೂರಿಯಾಗಿ ನೆರವೇರಿತು. ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ, ತಹಸೀಲ್ದಾರ ಜಗದೀಶ್ ಚೌರ್ ಮಹಾನ ಕ್ರಾಂತಿಯೋಗಿ ಅಂಬಿಗೇರ ಚೌಡಯ್ಯ ಅವರ ತತ್ವದರ್ಶಗಳು ನಮಗೆ ಹಿಂದಿಗೂ ಪೂರಕವಾಗಿವೆ ಎಂದರು, ಈ ಸಂದರ್ಭದಲ್ಲಿ ನಿವೃತ್ತ ಉಪನ್ಯಾಸಕರಾದ ಆರ್ ಎಲ್ ಸುಣಗಾರ, ಅವರು ಉಪನ್ಯಾಸ ನೀಡಿದರು, ಕೋಲಿ ಸಮಾಜದ ಹಿರಿಯ ಮುಖಂಡರು, ಯುವ ಮುಖಂಡರು, ಸೇರಿದಂತೆ ನೂರಾರು ಜನ ಸಮಾಜ ಭಾಂದವರು ಉಪಸ್ಥಿತರಿದ್ದರು ವೆಂಕಟೇಶ್ ದಾಸರ್ ಅವರು ನಿರೂಪಿಸಿ ವಂದಿಸಿದರು.