ತಹಸೀಲ್ದಾರ್ ಜಗದೀಶ್ ಎಸ್‌ಚೌರ್‌ಅಧಿಕಾರ ಸ್ವೀಕಾರ

ಸಂಜೆವಾಣಿ ವಾರ್ತೆ
ಮಾನ್ವಿ.ಫೆ.೧೩- ಮುಂಬರುವ ಲೋಕಸಭಾ ಚುನಾವಣೆ ಚುನಾವಣೆ ಹಿನ್ನೆಲೆಯಿಂದ ತಾಲೂಕಿಗೆ ನೂತನ ತಹಸೀಲ್ದಾರ್ ಜಗದೀಶ್ ಎಸ್ ಚೌರ್ ಇಂದು ಆಗಮಿಸಿ ಅಧಿಕಾರ ಸ್ವೀಕರಿಸಿದರು.
ಮಾನ್ವಿ ತಾಲೂಕಿನ ತಹಸೀಲ್ದಾರ್ ರಾಜು ಪೀರಂಗಿ ಲೋಕಸಭಾ ಚುನಾವಣೆ ನಿಮಿತ್ತ ಬೇರೆ ತಾಲೂಕಿಗೆ ವರ್ಗಾವಣೆಯಾಗಿದ್ದ ಸ್ಥಾನಕ್ಕೆ ಕಲಬುರಗಿ ಜಿಲ್ಲೆಯ ಶಹಬಾದ್ ತಾಲೂಕ ತಹಸೀಲ್ದಾರ್ ಜಗದೀಶ್ ಎಸ್‌ಚೌರ್ ಅವರು ಆಗಮಿಸಿ ಅಧಿಕಾರ ಸ್ವೀಕರಿಸಿದ್ದಾರೆ. ಸಂದರ್ಭದಲ್ಲಿ ಉಪ ತಹಸೀಲ್ದಾರ್ ಗ್ರೇಟ್ ೨ ಅಬ್ದುಲ್ ವಾಹಿದ್, ಕಂದಾಯ ಇಲಾಖೆಯ ಅಧಿಕಾರಿಗಳಾದ ವಿರುಪಣ್ಣ, ಮಹೇಶ ಪಾಟೀಲ, ತೀಶ್ ಕುಮಾರ, ಹನುಮಂತಪ್ಪ ನೀರಮಾನವಿ ಸೇರಿದಂತೆ ಇತರರು ಇದ್ದರು.