ಕೋಲಾರ.ಜೂ,೧೦-ನಗರದ ತಹಸೀಲ್ದಾರ್ ಕಛೇರಿಯಲ್ಲಿ ಮುಂದಿನ ದಿನಗಳಲ್ಲಿ ಬ್ರೋಕರ್‌ಗಳ ಕೆಲಸಗಳು ಮಾಡಲು ಅವಕಾಶವಿಲ್ಲ. ದಲ್ಲಾಳಿಗಳು ಬೇರೆ ಕೆಲಸಗಳನ್ನು ನೋಡಿ ಕೊಳ್ಳ ಬೇಕೆಂದು ಶಾಸಕ ಕೊತ್ತೂರು ಮಂಜುನಾಥ್ ಸೂಚಿಸಿದರು,
ನಗರದ ತಹಸೀಲ್ದಾರ ಕಛೇರಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಭೆಯ ನಂತರ ಅವರು ಮಾದ್ಯಮದವರೊಂದಿಗೆ ಮಾತನಾಡುತ್ತಾ ದಲ್ಲಾಳಿಗಳು ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಅಮಿಷಕ್ಕೆ ಒಳ ಪಡೆಸಿ ಶೀಘ್ರವಾಗಿ ಕೆಲಸಗಳನ್ನು ಮಾಡಿಸಿ ಕೊಳ್ಳುತ್ತಿದ್ದಾರೆ. ಇದರಿಂದ ಸಾರ್ವಜನಿಕರ ಕೆಲಸವನ್ನು ನಿರ್ವಹಿಸುವಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದ್ದಿಗಳು ನಿರಾಸಕ್ತಿ, ವಿಳಂಭ ಧೋರಣೆ ತೋರುತ್ತಿರುವುದರಿಂದ ತೊಂದರೆಗಳು ಉಂಟಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿ ಬರುತ್ತಿದೆ ಎಂದರು
ಮುಂದಿನ ದಿನಗಳಲ್ಲಿ ದಲ್ಲಾಳಿಗಳನ್ನು ದೂರವಿಟ್ಟು ಸಾರ್ವಜನಿಕರ ಕೆಲಸ ನಿರ್ವಹಿಸ ಬೇಕು, ಸಾರ್ವಜನಿಕರೊಂದಿಗೆ ಸೌಜನ್ಯ,ತಾಳ್ಮೇಯಿಂದ ವರ್ತಿಸಿ,ಗೌರವದಿಂದ ನಡೆದು ಕೊಳ್ಳಿ, ವಿನಾಕಾರಣ ಬಡರೈತರನ್ನು ಕಚೇರಿಗೆ ಅಲೆದಾಡಿಸ ಬೇಡಿ, ಒಳ್ಳೆಯ ಹೆಸರು ಪಡೆದು ಕೊಳ್ಳಿ ಅದೇ ನಿಮಗೆ ಶಾಶ್ವತ ಎಂದು ಕಿವಿ ಮಾತು ತಿಳಿಸಿರುವುದಾಗಿ ಹೇಳಿದರು,
ಮುಂದಿನ ದಿನಗಳಲ್ಲಿ ಕಚೇರಿಯಲ್ಲಿ ಸಿ.ಸಿ.ಕ್ಯಾಮೆರಗಳನ್ನು ಅಳವಡಿಸಲಾಗುವುದು, ಮುಂದೆ ಏಜೆಂಟ್‌ಗಳನ್ನು,ಬ್ರೋಕರ್‌ಗಳನ್ನು, ದಲ್ಲಾಳಿಗಳನ್ನು ಗುರುತಿಸಲಾಗುವುದು ಅವರ ಪೋಟೋಗಳನ್ನು ಕಚೇರಿಯಲ್ಲಿ ಹಾಕಲಾಗುವುದು ಅಧಿಕಾರಿಗಳು ಇವರ ಕೆಲಸಗಳನ್ನು ಮಾಡಬಾರದು ಎಂದು ಸೂಚಿಸಲಾಗುವುದು. ತಹಸೀಲ್ದಾರ್ ಕಚೇರಿಯಲ್ಲಿ ದೂರಿನ ಪೆಟ್ಟಿಗೆಗಳನ್ನು ಸ್ಥಾಪಿಸಲಾಗುವುದು.ಸಾರ್ವಜನಿಕರ ದೂರುಗಳನ್ನು ವಾರಕೊಮ್ಮೆ ನಾನೇ ಖುದ್ದಾಗಿ ಬಂದು ಪರಿಶೀಲಿಸಿ ಕ್ರಮ ಜರುಗಿಸುತ್ತೇನೆ ಎಂದರು.
ಸಾರ್ವಜನಿಕರು ತಹಸೀಲ್ದಾರ್ ಕಚೇರಿಯಲ್ಲಿ ಆಗದಿದ್ದರೆ ಸಹಾಯಕ ವಿಭಾಗಾಧಿಕಾರಿಗಳ ಕಚೇರಿಗೆ ಹೋಗಿ ಅಲ್ಲೂ ಅಗದಿದ್ದರೆ ಜಿಲ್ಲಾಧಿಕಾರಿಗಳ ಬಳಿ ಹೋಗಿ ಅಲ್ಲೂ ಆಗದಿದ್ದರೆ ನನ್ನ ಗಮನಕ್ಕೆ ತನ್ನಿ ಕಚೇರಿಯಲ್ಲಿ ಕೆಲವು ಸಿಬ್ಬಂದಿಗಳು ವೇತನ ಇಲ್ಲಿ ಪಡೆದು ಬೇರೆ ಕಡೆ ಕೆಲಸ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅವರು ಕೊಡಲೇ ಮೂಲ ಕಚೇರಿಗೆ ಬರಬೇಕು ಇಲ್ಲವಾದಲ್ಲಿ ಕೆಲಸ ಮಾಡುತ್ತಿರುವ ಕಡೆಯೇ ವರ್ಗಾವಣೆ ಮಾಡಿಸಿ ಕೊಳ್ಳಿ ಸರ್ಕಾರ ಮಾಡಿದ್ದರೆ ಸರ್ಕಾರಕ್ಕೆ ತೆರವಾಗಿರು ಜಾಗಕ್ಕೆ ಬೇರೆಯವರನ್ನು ನೇಮಿಸಲು ಕೋರಲಾಗುವುದು, ಕೆಲವರು ಬಹಳ ದಿನಗಳಿಂದ ಯವೂದೇ ಮಾಹಿತಿ ನೀಡದೆ ಕಛೇರಿಗೆ ಗೈರು ಹಾಜರಾಗುತ್ತಿದ್ದಾರೆ ಅವರನ್ನು ಶಾಶ್ವತವಾಗಿ ಮನೆಗೆ ಕಳುಹಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು,
ಕಚೇರಿಯಲ್ಲಿ ಹದಗೆಟ್ಟಿರುವ ಅವ್ಯವಸ್ಥೆಗಳನ್ನು ಸರಿಪಡೆಸಿ ಕೊಳ್ಳಲು ಕಾಲವಕಾಶ ನೀಡಲಾಗುವುದು ಇನ್ನು ಒಂದು ತಿಂಗಳಲ್ಲಿ ಕಚೇರಿಯಲ್ಲಿ ಎಲ್ಲಾ ದಾಖಲೆಗಳು ಸುವ್ಯವಸ್ಥೆಯಿಂದ ಕೊಡಿರ ಬೇಕು. ಸರ್ವೆ ಇಲಾಖೆಯಲ್ಲೂ ಅಷ್ಟೆ ಅದರ ಮೇಲೂ ವ್ಯಾಪಕವಾದ ದೂರುಗಳಿದೆ. ಎ.ಡಿ.ಎಲ್.ಆರ್. ಅವರ ಕಚೇರಿಯಲ್ಲೂ ಸೂಚಿಸಲಾಗಿದೆ, ನಮ್ಮಗಳ ಕೈ ಬಾಯಿ ಶುದ್ದವಾಗಿರ ಬೇಕು ಎಂದರು.
ನಂತರದಲ್ಲಿ ರೈತರ ಕಾರ್ಯಕ್ರಮಗಳಾದ ಪೋಡಿ ಅದಾಲತ್, ಖಾತಆದಾಲತ್, ಪಿ.ನಂಬರ್, ಸಾಗವಳಿ ಚೀಟಿ, ನಿವೇಶನ ಹಂಚಿಕೆ ಮನೆಗಳ ಹಂಚಿಕೆ ಸೇರಿದಂತೆ ಸರ್ಕಾರದ ಎಲ್ಲಾ ಯೋಜನೆಗಳನ್ನು ಅನುಷ್ಟನಕ್ಕೆ ತಂದು ಆರ್ಹರಾದ ಫಲಾನುಭವಿಗಳಿಗೆ ವಿತರಲಿಸಲು ಅಗತ್ಯ ಕ್ರಮಗಳನ್ನು ಜರುಗಿಲಾಗುವುದು. ನಾನು ಹಳೆ ಡಿ.ಸಿ. ಕಚೇರಿಯ ಕಟ್ಟಡದ ಅವರಣದಲ್ಲಿ ಸರ್ಕಾರವು ಮಂಜೂರು ಮಾಡಿರುವ ಕೊಠಡಿಯನ್ನು ಸರ್ಕಾರದ ಕಚೇರಿಯ ಮಾದರಿಯಂತೆ ಬೆಳಿಗ್ಗೆ ೯.೩೦ ರಿಂದ ಸಂಜೆ ೫.೩೦ರವರೆಗೆ ತೆರೆದಿರುತ್ತದೆ. ಇದರ ಪಕ್ಕದಲ್ಲೇ ವಿಧಾನ ಪರಿಷತ್ ಸದಸ್ಯರಾದ ಅನಿಲ್ ಕುಮಾರ್ ಅವರ ಕೊಠಡಿಯೂ ಇರುತ್ತದೆ. ಏನೇ ಸಮಸ್ಯೆಗಳಿದ್ದರೂ ಸಹ ಅರ್ಜಿಗಳನ್ನು ನೀಡ ಬಹುದಾಗಿದೆ. ಅಲ್ಲಿ ಸಿಬ್ಬಂದಿಯೊಬ್ಬರನ್ನು ನೇಮಕ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಹರ್ಷವರ್ಧನ್ ಉಪಸ್ಥಿತರಿದ್ದರು,