ತಹಸೀಲ್ದಾರ್ ಕಚೇರಿಯಲ್ಲಿ ಕಂದಾಯ ದಿನಾಚರಣೆ

ಮಾನ್ವಿ,ಜು.೦೨-
ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಕಂದಾಯ ದಿನಾಚರಣೆ ಅಂಗವಾಗಿ ತಹಸೀಲ್ದಾರ್ ಚಂದ್ರಕಾಂತ್ ಎಲ್.ಡಿ ಕೇಕ್ ಕತ್ತರಿಸುವ ಮೂಲಕ ಆಚರಿಸಿ ಮಾತನಾಡಿ ಪ್ರತಿ ವರ್ಷ ಜುಲೈ ೧ ರಂದು ರಾಜ್ಯದಲ್ಲಿ ಕಂದಾಯ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು ಹುಟ್ಟಿನಿಂದ ಸಾವಿನವರೆಗೆ ಕಂದಾಯ ಇಲಾಖೆಯ ಸೇವೆ ಸಾರ್ವಜನಿಕರಿಗೆ ಅಗತ್ಯವಿದೆ ಕಂದಾಯ ಇಲಾಖೆಯ ಅಧಿಕಾರಿಗಳು ಜನರಿಗೆ ಅಗತ್ಯವಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರೇಡ್-೨ ತಹಸೀಲ್ದಾರ್ ಅಬ್ದುಲ್ ವಾಹಿದ್, ಉಪತಹಸೀಲ್ದಾರ್ ರಾದ,ವಿರುಪ್ಪಣ್ಣ, ನಾಗರಾಜ, ವಿನಾಯಕರಾವ್, ನಾಗರಾಜ್, ಕಂದಾಯ ನಿರೀಕ್ಷಕರಾದ ಚರಣಸಿಂಗ್, ಸೇರಿದಂತೆ ತಾಲೂಕಿನ ವಿವಿಧ ಹೋಬಳಿಯ ಕಂದಾಯ ನೀರಿಕ್ಷಕರು ,ಗ್ರಾಮಲೇಕಾಧಿಕರಿಗಳು, ಕಚೇರಿ ಸಿಬ್ಬಂದಿ ಇದ್ದರು.