ತಹಸೀಲ್ದಾರ್ ಆದೇಶ ಉಲ್ಲಂಘಿಸಿದ ಸಂಗಾಪುರ ಗ್ರಾಮ ಲೆಕ್ಕಾಧಿಕಾರಿ

ರಾಯಚೂರು,ಮಾ.೧೪- ದೇವಸ್ಥಾನ ಶಾಖೆಯನ್ನು ಮಂಜುನಾಥಗೆ ಬಿಟ್ಟುಕೊಡುವಂತೆ ಮಾನ್ವಿ ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ್ ಅವರು ಆದೇಶ ಹೊರಡಿಸಿದ್ದು, ಆದರೆ ಸಂಗಾಪುರ ಗ್ರಾಮ ಲೆಕ್ಕಾಧಿಕಾರಿ ಬಿಟ್ಟುಕೊಡುತ್ತಿಲ್ಲದಿರುವುದು ನೋಡಿದರೆ ಇದರಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದ್ದರಿಂದ ಬಾಬು ಅವರನ್ನು ಅಮಾನತು ಮಾಡಬೇಕು ಎಂದು ಕರ್ನಾಟಕ ಜನಜಾಗೃತಿ ಸಮಿತಿ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿಯ ಸ್ಥಾನಿಕ ಅಧಿಕಾರಿಗೆ ಮನವಿ ಸಲ್ಲಿಸಿದರು.
ಮಾನ್ವಿ ತಾಲೂಕಿನ ಬೋಗಾವತಿ ಗ್ರಾಮದ ಬಸವರಾಜ ಪೂಜಾರಿ ಅವರು ೨೦೨೦ನೆ ಸಾಲಿನ ತಸ್ಧೀಖ್ ಭತ್ಯೆ ನೀಡುವಂತೆ ಬಾಬು ಅವರಿಗೆ ಕೈಮುಗಿದು ಬೇಡಿಕೊಂಡಿದ್ದರು. ಆದರೆ ಬಾಬು ಅವರು ನಾನು ನೀಡುವುದಿಲ್ಲ ಯಾರಿಗಾದರು ಹೇಳಿಕೊ ಎಂದು ಅವಾಜ್ ಹಾಕಿದ್ದರು. ಹೀಗಾಗಿ ದಿಕ್ಕು ತೋಚದ ಬಸವರಾಜು ಪೂಜಾರಿ ಹಿರೇಕೊಟ್ನೇಕಲ್ ಗ್ರಾಮದ ತಿಮ್ಮಣ್ಣ ಬೋಗಾವತಿ, ನೀರಮಾನ್ವಿ ಗ್ರಾಮದ ನಾಗರಾಜ ಹಾಗೂ ಸಂಗಾಪುರ ಗ್ರಾಮದ ಈಶಪ್ಪನತ್ತಿರ ಅಳಲು ತೋಡಿಕೊಂಡಿದ್ದ ಬಸವರಾಜು.
ಆದರೂ ತಸ್ಧೀಖ್ ಭತ್ಯೆ ಯಾಕೆ ನೀಡುತ್ತಿಲ್ಲವೆಂದು ಕರ್ನಾಟಕ ಜನಜಾಗೃತಿ ಸಮಿತಿ ಸದಸ್ಯರು ತೆರಳಿ ಸಂಗಾಪುರ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಬಾಬು ಅವರ ಹತ್ತಿರ ಕೇಳಿದಾಗ ನಾನು ಕೊಡುವುದಿಲ್ಲ ತಸ್ಧೀಖ್ ಭತ್ಯೆ ಎಂದು ಅವಾಜ್ ಹಾಕಿದ್ದಾರೆ.
ಕೊನೆಗೆ ಮಾಧ್ಯಮದವರ ಹತ್ತಿರ ಹೋದಾಗ ಸುದ್ದಿ ಪ್ರಸಾರವಾದ ನಂತರ ಮಾನ್ವಿ ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ್ ಅವರು ಫೆಬ್ರವರಿ ೨೩ರಂದು ಆದೇಶ ಹೊರಡಿಸಿ ಈ ಕೂಡಲೆ ದೇವಸ್ಥಾನ ಶಾಖೆಯನ್ನು ಕೆ.ಮಂಜುನಾಥ ಅವರು ನಿರ್ವಹಣೆ ಮಾಡಬೇಕು ಎಂದು ಸೂಚಿಸಿದ್ದಾರೆ.
ಆದರೆ ಕೆ.ಮಂಜನಾಥ ಅವರು ಸರ್ ನನಗೆ ಚಾರ್ಜ್ ಕೊಡುತ್ತಿಲ್ಲ. ೨೦ ದಿನಗಳಾದರು ಕೊಡುತ್ತಿಲ್ಲವೆಂದಾಗ ನಾನು ಮಾಡೋದು ಬೇಡವಾ ಎಂದು ಕೇಳಿದಾಗ ಬಾಬು ಅವರು ಮಾತ್ರ ಚಾರ್ಜ್ ಕೊಡುತ್ತಿಲ್ಲ. ಬಾಬು ಅವರು ತಹಸೀಲ್ದಾರ್ ಆದೇಶವನ್ನು ಉಲ್ಲಂಘಿಸಿ ೨೦ ದಿನವಾದರು ಚಾರ್ಜ್ ಕೊಡುತ್ತಿಲ್ಲವೆಂದರೆ ತಹಸೀಲ್ದಾರ್ ಬಾಬುನ ಅಥವಾ ಎಲ್.ಡಿ.ಚಂದ್ರಕಾಂತ್ ಎಂದು ಆರೋಪಿಸಿದರು.
ಸಂಗಾಪುರ ಗ್ರಾಮ ಲೆಕ್ಕಾಧಿಕಾರಿ ಬಾಬು ಅವರು ಕೆಲವರ ಮುಂದೆ ದೇವಸ್ಥಾನ ಶಾಖೆಯನ್ನು ನಾನೆ ಮಾಡುತ್ತೇನೆಂದು ಎಂದು ಹೇಳುತ್ತಾರೆ. ಇದರಲ್ಲಿ ತಹಸೀಲ್ದಾರ್ ಆದೇಶಕ್ಕೆ ಕಿಮ್ಮತ್ತಿಲ್ಲವಾ ಎಂದು ತಿಳಿಯದಾಗಿದೆ. ದೇವಸ್ಥಾನ ಶಾಖೆಯನ್ನು ಮಂಜುನಾಥ ಅವರಿಗೆ ನೀಡಲಾಗಿದೆ ಎಂದು ತಹಸೀಲ್ದಾರ್ ಹೇಳುತ್ತಾರೆ. ಇದರಲ್ಲಿ ತಹಸೀಲ್ದಾರ್ ಗೋಲ್‌ಮಾಲ್ ನಡೆಸಿದ್ದರಿಂದ ಬೇಕಾಬಿಟ್ಟಿಯಾಗಿ ಆದೇಶ ಮಾಡಿದ್ದಾರೆಂದು ಗೊತ್ತಾಗುತ್ತದೆ.
ದೇವಸ್ಥಾನ ಶಾಖೆಗೆ ಕೆಲಸದ ನಿಮಿತ್ತವಾಗಿ ಸಾರ್ವಜನಿಕರು ನಿತ್ಯ ಬರುತ್ತಿದ್ದು, ಆದರೆ ಯಾರು ದೇವಸ್ಥಾನ ಶಾಖೆಯನ್ನು ನೋಡುತ್ತಾರೆಂದು ತಿಳಿಯದಾಗಿದೆ. ತಹಸೀಲ್ದಾರ್ ಆದೇಶವನ್ನು ಉಲ್ಲಂಘಿಸಿ ಸಂಗಾಪುರ ಗ್ರಾಮ ಲೆಕ್ಕಾಧಿಕಾರಿ ಬಾಬು ಅವರು ಕಾರ್ಯನಿರ್ವಹಣೆ ಮಾಡುತ್ತಾರೆಂದರೆ ಈತನ ಹಿಂದೆ ಯಾರಿದ್ದಾರೆ ಎಂಬುದು ತಿಳಿಯದಾಗಿದೆ. ದೇವಸ್ಥಾನ ಶಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು, ದೇವಸ್ಥಾನ ಶಾಖೆಯನ್ನು ಬಾಬು ಅವರು ಬಿಟ್ಟುಕೊಡುತ್ತಿಲ್ಲವೆಂದರೆ ಇದರಲ್ಲಿ ಏನೋ ಹಡಗಿದೆ ಭ್ರಷ್ಟಾಚಾರದ ವಾಸನೆ ಎಂದು ತಿಳಿಯುತ್ತಿಲ್ಲ.
ತಹಸೀಲ್ದಾರ್ ಆದೇಶವನ್ನು ಉಲ್ಲಂಘಿಸಿದ್ದಾನೆ ಎಂದ ಮೇಲೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಆದೇಶವನ್ನು ಸಹ ಉಲ್ಲಂಘಿಸುತ್ತಾನೆ ಈತ ಬಾಬು. ಹೀಗಾಗಿ ಜಿಲ್ಲಾಧಿಕಾರಿಗಳೆ ನಮ್ಮ ಮನವಿಯನ್ನು ಸ್ವೀಕರಿಸಿ ಬಾಬು ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಜನಜಾಗೃತಿ ಸಮಿತಿ ತಾಲೂಕಾಧ್ಯಕ್ಷ ನಾಗರಾಜ ನೀರಮಾನ್ವಿ, ಗೌರವಾಧ್ಯಕ್ಷ ತಿಮ್ಮಣ್ಣಬೋವಿ, ಸಂಘಟನಾ ಸಂಚಾಲಕರಾದ ಈಶಪ್ಪ ಸಂಗಾಪುರ, ಸಮಿತಿ ಸದಸ್ಯರಾದ ಬಸವರಾಜ ಹೂಗಾರ್ ಪೂಜಾರಿ, ಮಹಾದೇವಪ್ಪ ಸೇರಿದಂತೆ ಇನ್ನಿತರರಿದ್ದರು.