ತಹಸೀಲ್ದಾರ್‌ಗೆ ಗಂಗಾಮತ ಸಮುದಾಯ ಮುಖಂಡರಿಂದ ಮನವಿ

ಸಾಂಸ್ಕೃತಿಕ ಭವನಕ್ಕೆ ಜಮೀನು ನೀಡಿ
ದೇವದುರ್ಗ.ಸೆ.೨೨- ಗಂಗಾಮತ ಸಮುದಾಯದ ಜನರು ಯಾವುದೇ ಕಾರ್ಯಕ್ರಮ ಮಾಡಲು ಸಾಂಸ್ಕೃತಿಕ ಭವನದ ಕೊರತೆಯಿದ್ದು ಸಮುದಾಯಕ್ಕೆ ಭವನ ನಿರ್ಮಾಣ ಮಾಡಲು ೪ಎಕರೆ ಜಮೀನು ಮಂಜೂರು ಮಾಡುವಂತೆ ಒತ್ತಾಯಿಸಿ ಪಟ್ಟಣದ ಮಿನಿವಿಧಾನಸೌಧದಲ್ಲಿ ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್‌ಗೆ ತಾಲೂಕು ಗಂಗಾಮತ ಸಮುದಾಯ ಸೇವಾ ಸಂಘ ಬುಧವಾರ ಮನವಿ ಸಲ್ಲಿಸಿತು.
ತಾಲೂಕಿನಲ್ಲಿ ಗಂಗಾಮತ ಸಮುದಾಯದ ಜನರು ಸುಮಾರು ೩೦ಸಾವಿರವಿದ್ದು, ಯಾವುದೇ ಕಾರ್ಯಕ್ರಮ ಮಾಡಲು ನಿರ್ದಿಷ್ಟ ವೇದಿಕೆ ಹಾಗೂ ಜಾಗರದ ಕೊರತೆಯಿದೆ. ಇದರಿಂದ ಸಭೆ, ಸಮಾರಂಭ, ಮದುವೆ ಸೇರಿ ವಿವಿಧ ಕಾರ್ಯಕ್ರಮ ಮಾಡಲು ಸಮಸ್ಯೆಯಾಗಿದೆ. ಇದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ ಎಂದು ದೂರಿದರು.
ಕೂಡಲೇ ಪಟ್ಟಣದಲ್ಲಿ ಲಭ್ಯವಿರುವ ಕಂದಾಯ ಇಲಾಖೆ ಜಾಗದಲ್ಲಿ ಸಮುದಾಯಕ್ಕೆ ಅನುಕೂಲವಾಗುವಂತೆ ನಾಲ್ಕು ಎಕರೆ ಜಾಗ ಮಂಜೂರು ಮಾಡಬೇಕು. ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು. ತಾಲೂಕು ಕಾರ್ಯಾಧ್ಯಕ್ಷ ಕೆ.ಸಾಬಣ್ಣ ಗೂಗಲ್, ಮುಖಂಡರಾದ ಪ್ರಭಾಕರ ಅಂಬಿಗರ, ಅಮರೇಶ ಎಂ.ದೇವದುರ್ಗ, ಪ್ರಧಾನ ಕಾರ್ಯದರ್ಶಿ ಶಂಕರಲಿಂಗ ದೊಡ್ಡಮನಿ ಹೂವಿನಹೆಡಗಿ, ನರಸಪ್ಪ ಅಂಚೆಸೂಗೂರು ಇತರರಿದ್ದರು.