ತಹಸಿಲ್ ಕಚೇರಿಯಲ್ಲಿ ಕೊಳೆತ ಆಹಾರಧಾನ್ಯ

ವದುರ್ಗ: ತಾಲೂಕಿನಲ್ಲಿ ೨೦೧೯ರಲ್ಲಿ ಉಂಟಾದ ನೆರೆಹಾವಳಿ ಹಾಗೂ ಕರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೀಡಾದ ಸಂತ್ರಸ್ತರಿಗೆ ವಿತರಿಸಲು ವಿವಿಧ ಸಂಘ ಸಂಸ್ಥೆಗಳು ಹಾಗೂ ಹಟ್ಟಿ ಚಿನ್ನದಗಣಿ ಕಂಪನಿ ಪೂರೈಕೆ ಮಾಡಿದ ಆಹಾರಧಾನ್ಯಗಳು ವಿತರಣೆಯಾಗದೆ ತಹಸಿಲ್ ಕಚೇರಿಯಲ್ಲಿ ಕೊಳೆಯುತ್ತಿರುವುದು ಬೆಳಕಿಗೆ ಬಂದಿದೆ.
ನೆರೆಹಾವಳಿ ಹಾಗೂ ಲಾಕ್‌ಡೌನ್‌ನಿಂದ ತೀವ್ರ ಸಂಕಷ್ಟಕ್ಕೀಡಾದ ರೈತರು, ಕೂಲಿಕಾರರು, ಬಡವರು ಸೇರಿದಂತೆ ವಿವಿಧ ವರ್ಗದ ಜನರಿಗೆ ಹಂಚಿಕೆ ಮಾಡಲು ಧಾನಿಗಳು ಅಕ್ಕಿ, ಬೇಳೆ, ಎಣ್ಣೆ, ಮಸಾಲಾ ಪದಾರ್ಥ ಸೇರಿದಂತೆ ವಿವಿಧ ಆಹಾರಧಾನ್ಯ ತಾಲೂಕು ಆಡಳಿತಕ್ಕೆ ನೀಡಿದ್ದಾರೆ. ಅದರಂತೆ ಹಟ್ಟಿ ಚಿನ್ನದಗಣಿ ಕಂಪನಿ ಸುಮಾರು ೪೫೦ಪ್ಯಾಕೇಟ್ ಅಕ್ಕಿ ತಾಲೂಕು ಆಡಳಿತಕ್ಕೆ ನೀಡಿದೆ.
ವಿವಿಧ ಸಂಘ ಸಂಸ್ಥೆಗಳು ನೀಡಿದ ಆಹಾರ ಕಿಟ್‌ಗಳನ್ನು ತಾಲೂಕು ಆಡಳಿತ ಬೇಕಾಬಿಟ್ಟಿಯಾಗಿ ಮಾಡಿರುವುದು ಬಗ್ಗೆ ಆರೋಪಗಳಿವೆ. ಕೆಲ ಕಡೆ, ನದಿದಂಡೆ ಗ್ರಾಮಗಳಿಗೆ ಅಲ್ಪಸ್ವಲ್ಪ ವಿತರಣೆ ಮಾಡಿದ್ದಾರೆ. ಸುಮಾರು ಒಂದು ಲೋಡಿನಷ್ಟು ಆಹಾರಧಾನ್ಯಗಳನ್ನು ಮಿನಿವಿಧಾನಸೌಧ ಕೆಳ ಮಹಡಿ ಕೊಠಡಿಯಲ್ಲಿ ಸಂಗ್ರಹಿಸಲಾಗಿದೆ. ಇದನ್ನು ವಿತರಣೆ ಮಾಡದೆ ಸಂಗ್ರಹಿಸಿದ್ದರಿಂದ ಬಹುತೇಕ ಧಾನ್ಯಗಳು ಕೊಳೆತ ಸ್ಥಿತಿಯಲ್ಲಿವೆ.
ಇದನ್ನು ಸಂಘ ಸಂಸ್ಥೆಗಳು ಗುರುತಿಸಿ ದೂರು ನೀಡಿದ ಹಿನ್ನೆಲೆಯಲ್ಲಿ ತಮ್ಮ ಕರ್ತವ್ಯ ಲೋಪ ಮರೆಮಾಚಸಲು ಅವುಗಳನ್ನು ಲಾರಿಗಳಲ್ಲಿ ತುಂಬಿಕೊಂಡು ಅರಕೇರಾದ ನಾಡ ಕಚೇರಿಗೆ ಕಳಿಸಲು ಮುಂದಾಗಿದ್ದಾರೆ. ಅಧಿಕಾರಿಗಳ ಈ ನಡೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ದಾನಿಗಳು ನೀಡಿದ ಆಹಾರಧಾನ್ಯ, ಫಲಾನುಭವಿಗಳಿಗೆ ಹಂಚಿಕೆ ಮಾಡಿದೆ ಹಾಳು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕೋಟ್=======
ದಾನಿಗಳು ನೀಡಿದ್ದ ಆಹಾರಧಾನ್ಯಗಳನ್ನು ಸ್ಟೋರ್ ರೂಂ ಕೊರತೆಯಿಂದ ಮಿನಿವಿಧಾನಸೌಧ ಕೊಠಡಿಯಲ್ಲಿ ಸಂಗ್ರಹಿಸಲಾಗಿತ್ತು. ಇದನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲು ಬೇರೆ ಗೋದಾಮಿಗೆ ಕಳಿಸಲಾಗಿದೆ. ಇದರಲ್ಲಿ ಯಾವುದೇ ಲೋಪದೋಷವಿಲ್ಲ. ಆಹಾರಧಾನ್ಯ ಚನ್ನಾಗಿ ಇದ್ದು, ಬಡವರಿಗೆ ಹಂಚಿಕೆ ಮಾಡಲಾಗುವುದು.
| ಮಧುರಾಜ್ ಯಾಳಗಿ

ತಹಸೀಲ್ದಾರ್, ದೇವದುರ್ಗ

ಕೋಟ್=====

ಬಡವರು ಹಾಗೂ ನಿರ್ಗತಿಕರಿಗೆ ಹಂಚಿಕೆ ಮಾಡಲು ಹಟ್ಟಿಚಿನ್ನದ ಗಣಿ ಕಂಪನಿ ಸುಮಾರು ೪೫೦ ಪ್ಯಾಕೇಟ್ ಅಕ್ಕಿ ಸೇರಿ ವಿವಿಧ ಧಾನ್ಯಗಳನ್ನು ತಾಲೂಕು ಆಡಳಿತಕ್ಕೆ ವಿತರಿಸಿದೆ. ಆದರೆ, ಅಧಿಕಾರಿಗಳು ಅವುಗಳನ್ನು ಹಂಚಿಕೆ ಮಾಡದೆ, ಮಿನಿವಿಧಾನಸೌಧ ಕಚೇರಿಯಲ್ಲಿ ಸಂಗ್ರಹಿಸಿದ್ದಾರೆ. ಈಗ ಈ ಧಾನ್ಯಗಳು ಹಾಳಾಗಿವೆ. ಗ್ರಾಪಂ ಚುನಾವಣೆ ಸಂದರ್ಭದಲ್ಲಿ ಈ ಧಾನ್ಯಗಳನ್ನು ಬೇರೆ ಕಡೆ ಕಳಿಸುವ ಅಗತ್ಯವೇನಿತ್ತು.

| ಹನುಮಂತ್ರಾಯ ಚಿಂತಲಕುಂಟಿ

ವಕೀಲರು ಹಾಗೂ ಜೆಡಿಎಸ್ ನಾಯಕ