ತಹಸಿಲ್ದಾರ, ಸಿಬ್ಬಂದಿಗಳಿಂದ ನೈಟ್ ಕರ್ಪ್ಯೂ ರೌಂಡ್ಸ್

ಧಾರವಾಡ,ಏ22: ಧಾರವಾಡ ತಹಸಿಲ್ದಾರ ಸಂತೋಷ ಬಿರಾದಾರ ಅವರು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ನಿನ್ನೆ ರಾತ್ರಿ ಕರ್ಪ್ಯೂ ಜಾರಿ ಸಲುವಾಗಿ ವಿಧಿಸಿರುವ ಕಲಂ 144 ರ ನಿಷೇಧಾಜ್ಞೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಗೊಳಿಸಿರುವದರ ಕುರಿತು ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಹಾಗೂ ಸುಪರ್ ಮಾರ್ಕೆಟ್, ಸುಭಾಸರಸ್ತೆ, ಲೈನ್ ಬಜಾರ, ಟಿಕಾರೆ ರಸ್ತೆ, ಶಿವಾಜಿ ಸರ್ಕಲ್ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು.
ನಂತರ ನರೇಂದ್ರ ಕ್ರಾಸ್‍ವರೆಗೆ ಸಂಚರಿಸಿ, ನರೇಂದ್ರ ಕ್ರಾಸ್ ದಲ್ಲಿ ಆದೇಶ ಉಲ್ಲಂಘಿಸಿ, 9 ಗಂಟೆ ನಂತರವು ಮಾವಿನ ಹಣ್ಣಿನ ಅಂಗಡಿ ತೆರೆದಿದ್ದ ಅಂಗಡಿ ಮಾಲೀಕನಿಗೆ ದಂಡ ವಿಧಿಸಿ, ತಕ್ಷಣ ಬಂದ್ ಮಾಡಿಸಿದರು.
ತಹಸಿಲ್ದಾರ ಅವರೊಂದಿಗೆ ಕಂದಾಯ ನಿರೀಕ್ಷಕ, ಗ್ರಾಮಲೆಕ್ಕಾಧಿಕಾರಿಗಳು ಇದ್ದರು.