ತಹಸಿಲ್ದಾರ್ ಮೇಲೆ ಕ್ರಮಕ್ಕೆ ಡಿಎಸ್‌ಎಸ್ ಒತ್ತಾಯ

ರಾಯಚೂರು,ಜೂ.೧-ರಾಯಚೂರು ತಹಸಿಲ್ದಾರ್ ಕಾನೂನುಗಳನ್ನು ಉಲ್ಲಂಘನೆ ಮಾಡಿ ಲಿಂಗಾಯತ ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಕೊಡಲು ಮುಂದಾಗಿದ್ದು ಕೂಡಲೇ ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ರಜೆ ವ್ಯಾಪ್ತಿ ಕಾರ್ಯಕ್ರಮಗಳನ್ನು ನೀಡಲು ಲಿಂಗಾಯತರ ಬೇಡ ಜಂಗಮರು ಮತ್ತು ಬೇಡ ಜಂಗಮರ ಮಧ್ಯೆ ಸುಮಾರು ವ್ಯತ್ಯಾಸಗಳಿಂದ ಲಿಂಗಾಯತ ಬೇಡ ಜಂಗಮರು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೊಡಲು ಬರುವುದಿಲ್ಲವೆಂದು ಸ್ಪಷ್ಟವಾದ ದೇಶಗಳು ಇವೆ.ಆದರೂ ರಾಯಚೂರು ತಹಸಿಲ್ದಾರ್ ರರು ಗ್ರೇಡ್೨
ತಹಸಿಲ್ದಾರರು ಕೂಡಿಕೊಂಡು ೧೦ ಜನರಿಗೆ ಲಿಂಗಾಯತ ಬೇಡ ಜಂಗಮ ಜನಾಂಗಕ್ಕೆ ಪ.ಜಾತಿ ಪ್ರಮಾಣ ಪತ್ರ ನೀಡಿದ್ದು ಸಚಿವರಿಗೆ ಮನವಿ ಕೊಟ್ಟಾಗ ಜಿಲ್ಲಾಧಿಕಾರಿಗಳು ಮದ್ಯೆ ಪ್ರವೇಶಿಸಿ ೧೦ ಜನ ಲಿಂಗಾಯತ ಬೇಡ ಜಂಗಮರಿಗೆ ನೀಡಿದ ಪ.ಜಾತಿ ಪ್ರಮಾಣ ಪತ್ರಗಳನ್ನು ರದ್ದುಪಡಿಸಲು ಹಾಗೂ ಗ್ರೇಡ್ ೨ ತಹಸಿಲ್ದಾರರಿಗೇ ನೀಡಿದ ಅಧಿಕಾರವನ್ನು ರದ್ದು ಪಡಿಸಿದರು.
ರಾಯಚೂರು ತಹಸಿಲ್ದಾರರು ಪ.ಜಾತಿ ಪ್ರಮಾಣ ಪತ್ರಗಳನ್ನು ಲಿಂಗಾಯತ ಬೇಡ ಜನಾಂಗಕ್ಕೆ ಕೊಡಲು ಮುಂದಾಗಿದ್ದಾರೆ.ಕೋವಿ ಡ್ ಕಾನೂನುಗಳನ್ನು ಮತ್ತು ವಿಚಾರಣೆ ನಡೆಸದೆ ಕಾನೂನುಗಳನ್ನು ಉಲ್ಲಂಘನೆ ಮಾಡಿ ಬೇಡ ಜಂಗಮರಿಗೆ ಪ ಜಾತಿ ಪ್ರಮಾಣ ಪತ್ರ ಕೊಡಲು ಮುಂದಾಗಿರುವ ತಹಸಿಲ್ದಾರರ ಮೇಲೆ ಕಾನೂನು ಕ್ರಮ ಕೈ ಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶರಣಪ್ಪ ದಿನ್ನಿ,ಚನ್ನಬಸವ,ಹನುಮಂತ ಅರೋಲಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.