ತಹಸಿಲ್ದಾರ್ ಕಚೇರಿ ಸ್ಥಳಾಂತರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.08: ನಗರದಲ್ಲಿನ ತಾಲೂಕು ಕಚೇರಿಯನ್ನು ಹೊಸ ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರ ಮಾಡಿದೆ.
ಕಳೆದ ಹಲವಾರು ದಶಕಗಳಿಂದ ನಗರದ ಮಧ್ಯ ಭಾಗದಲ್ಲಿ ಬ್ರಿಟೀಷರ ಆಡಳಿತ ಅವಧಿಯಲ್ಲಿ ನಿರ್ಮಿಸಿದ ಶತಮಾನದ  ಕಟ್ಟಡದಲ್ಲಿದ್ದ ತಹಸಿಲ್ದಾರ್ ಕಚೇರಿಯನ್ನು. ಇದೇ ಆವರಣದಲ್ಲಿ ಹಿಂಭಾಗದಲ್ಲಿ ಕರುಣಾಕರ ರೆಡ್ಡಿ ಅವರು ಕಂದಾಯ ಸಚಿವರಾಗಿದ್ದಾಗ  ನಿರ್ಧಿರಿಸಿ ಭೂಮಿ ಪೂಜೆ ಮಾಡಿತ್ತು.
ಆದರೆ ಅದು ನಿರ್ಮಾಣವಾಗದೆ. ತಹಸಿಲ್ದಾರ್ ಕಚೇರಿ ಕಡತಗಳ ರಕ್ಷಣೆ ಸೇರಿದಂತೆ ಹಲವು ವಿಭಾಗಗಳಿಗೆ ಸಮಸ್ಯೆ ಆಗಿತ್ತು. ಅದಕ್ಕಾಗಿ ಈಗ  ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರ ಮಾಡಿದೆ.
ಇನ್ನು ಈ ಕಚೇರಿಗೆ ಸಬ್ ರಿಜಿಸ್ಟರ್ ಆಫೀಸ್ ಸ್ಥಳಾಂತರ ಮಾಡಲಿದ್ದಾರೆಂದು‌ ತಿಳಿದು ಬಂದಿದೆ.

One attachment • Scanned by Gmail