ತಹಶೀಲ ಕಚೇರಿಯಲ್ಲಿ ಸೂರ್ಯ ನಮಸ್ಕಾರ

ಚಿಂಚೋಳಿ ಜ 14: ಇಲ್ಲಿನ ತಹಶೀಲ ಕಚೇರಿಯಲ್ಲಿ ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯದ ಆದೇಶದಂತೆ ತಹಶೀಲ್ದಾರ್ ಅಂಜುಮ್ ತಬಸ್ಸುಮ್. ಅವರ ನೇತೃತ್ವದಲ್ಲಿ ಮಕರ ಸಂಕ್ರಾಂತಿ ದಿನವಾದ ಇಂದು ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಮಾಧ್ಯಮದವರ ಜೊತೆಗೆ ತಹಶೀಲ್ದಾರ್ ಅಂಜುಮ್ ತಬಸ್ಸುಮ್. ಅವರು ಮಾತನಾಡಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಹಾಗೂ ಕಲಬುರ್ಗಿ ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ತಹಶೀಲ ಕಚೇರಿ ಸಿಬ್ಬಂದಿ ಎಲ್ಲಾ ಸೇರಿ ಸೂರ್ಯನಮಸ್ಕಾರವನ್ನು ಮಾಡಿದ್ದೇವೆ ಎಂದು ಅವರು ಹೇಳಿದರು ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ್ ವೆಂಕಟೇಶ್ ದುಗ್ಗನ. ಮತ್ತು ತಹಶೀಲ ಕಚೇರಿ ಸಿಬ್ಬಂದಿಗಳು ಇದ್ದರು