ತಹಶೀಲ್ದಾರ್ ಮೇಲೆ ರೇಗಿದ ವ್ಯಕ್ತಿ; ಪೊಲಿಸರ ವಶ

ದಾವಣಗೆರೆ.ಏ.೨೩; ಮಾಸ್ಕ್ ಹಾಕು ಎಂದಿದ್ದಕ್ಕೆ ತಹಶೀಲ್ದಾರ್ ಮೇಲೆ ರೇಗಾಡಿದ ವ್ಯಕ್ತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ದಾವಣಗೆರೆಯ ಕಾಳಿಕಾದೇವಿ ರಸ್ತೆಯಲ್ಲಿ  ಘಟನೆ ನಡೆದಿದ್ದು, ಮಾಸ್ಕ್ ಜಾಗೃತಿ ಹಾಗೂ ಅಂಗಡಿಗಳನ್ನು ಮುಚ್ಚಿಸುತ್ತಿದ್ದ ತಹಶೀಲ್ದಾರ್ ಗಿರೀಶ್ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಬುದ್ದಿ ಮಾತು ಹೇಳಿದ್ದಕ್ಕೆ ತಹಶೀಲ್ದಾರ್ ಹಾಗೂ ಪೊಲೀಸರ ಮೇಲೆಯೇ ಎಗರಾಡಿದ. ಆ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ಗಾಂಧಿನಗರ ಠಾಣೆಗೆ ಕರೆದುಕೊಂಡು ಹೊಗಲಾಗಿದೆ.