ತಹಶೀಲ್ದಾರ್ ಕಿರಣಕುಮಾರ್ ಕುಲಕರ್ಣಿ ಅವರಿಗೆ  ಸನ್ಮಾನ 

ಕುಕನೂರು ಮೇ 13 :ನೂತನ ಕುಕನೂರು ತಾಲೂಕಿನ ತಹಶೀಲ್ದಾರ್ ಆಗಿ 2ವರ್ಷಗಳ ಕಾಲ ಪ್ರಾಮಾಣಿಕ ದಕ್ಷತೆಯಿಂದ ಸೇವೆ ಸಲ್ಲಿಸಿದ ಕಿರಣಕುಮಾರ್ ಕುಲಕರ್ಣಿಯವರು ಕರೋನಾ ಹಾಗೂ ಗ್ರಾಮ ಪಂಚಾಯಿತಿ , ಪಟ್ಟಣ ಪಂಚಾಯಿತಿ ಚುನಾವಣೆಯನ್ನು ಸಮರ್ಥವಾಗಿ ನಿಭಾಯಿಸಿದ ಕಾರ್ಯ ಶ್ಲಾಘನೀಯವಾಗಿದ್ದು ಎಂದು  ತಹಶೀಲ್ದಾರ್   ಚಿದಾನಂದ ಗುರುಸ್ವಾಮಿ ಹೇಳಿದರು
ಕುಕನೂರು ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಕಿರಣಕುಮಾರ್ ಕುಲಕರ್ಣಿಯವರ ವರ್ಗಾವಣೆಯ ಬೀಳ್ಕೊಡುಗೆ ಸಮಾರಂಭ ಹಮ್ಮಿ ಕೊಂಡು ಮಾತನಾಡಿದ ಅವರು,ನೂತನ ತಾಲ್ಲೂಕಿನಲ್ಲಿ ಕಚೇರಿಯ ಸಿಬ್ಬಂದಿಗಳ ಕೊರತೆ ಕಚೇರಿಗಳ ಕೊರತೆ ಹಾಗೂ ನಾನಾ ಸಮಸ್ಯೆಗಳು ಎದುರಾಗಿರುತ್ತವೆ ಅಂತಹ ಸಂದರ್ಭದಲ್ಲಿ ಎದೆಗುಂದದೆ ಸಮರ್ಥವಾಗಿ ಕೆಲಸ ಮಾಡುವುದು ಕಷ್ಟಸಾಧ್ಯ,ಅಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಕಂದಾಯ ಅದಾಲತ್ ಹಾಗೂ ವಿವಿಧ ಕಾರ್ಯಕ್ರಮ ತಾಲೂಕಿನಲ್ಲಿ ಹಾಕಿಕೊಳ್ಳುವುದುರ ಮೂಲಕ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳೊಡನೆ ಕಚೇರಿಯ ಸಿಬ್ಬಂದಿಯೊಂದಿಗೆ ಪ್ರೀತಿ ಸ್ನೇಹ ಸಂಬಂಧದಿಂದ ಎಲ್ಲ ಅಧಿಕಾರಿಗಳಿಗೂ ಮಾರ್ಗದರ್ಶಕರಾಗಿದ್ದರು ಮುಂದೆ ಉನ್ನತ ಹುದ್ದೆ ಅಲಂಕರಿಸಿ ಮತ್ತೆ ತಾಲ್ಲೂಕಿನಲ್ಲಿ ಮೇಲಾಧಿಕಾರಿಯಾಗಿ ಬಂದು ಈ ಭಾಗಕ್ಕೆ ಇನ್ನಷ್ಟು ಸೇವೆಸಲ್ಲಿಸಲಿ ಎಂದರು
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಾಗೂ ಸಿಬ್ಬಂದಿಗಳಿಂದ ವಿವಿಧ ಇಲಾಖೆಯ ಅಧಿಕಾರಿಗಳಿಂದ ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ ಅವರಿಗೆ  ಸನ್ಮಾನಿಸಲಾತ್ತು.
ಈ ಸಂದರ್ಭದಲ್ಲಿ ಯಲಬುರ್ಗಾ ತಹಶೀಲ್ದಾರ್ ಶ್ರೀಶೈಲ ತಳವಾರ್  ವೈದ್ಯಕೀಯ ಕ್ಷೇತ್ರ ಶಿಕ್ಷಣ ಅಧಿಕಾರಿ ಮೌನೇಶ್ ಬಡಿಗೇರ್ ಪಿಎಸ್ ಐ ಡಾಕೇಶ ಹಾಗೂ ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ವರ್ಗ ಇತರರು ಉಪಸ್ಥಿತರಿದ್ದರು