ತಹಶೀಲ್ದಾರ್ ಕಛೇರಿಯ ಆವರಣದಲ್ಲಿ ಶಾಸಕರಿಂದ ವಿಶ್ವ ಪರಿಸರ ದಿನಾಚಣೆ

????????????????????????????????????

ಸಿರುಗುಪ್ಪ ಜೂ 06 : ನಗರದ ತಾಲೂಕು ಆಡಳಿತ ಕಛೇರಿಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರು ಸಸಿಯನ್ನು ನೆಟ್ಟು ನೀರು ಹಾಕಿದರು.
ನಂತರ ಮಾತನಾಡಿದ ಅವರು ಕೋವಿಡ್-19ನ ಕಠಿಣ ಪರಿಸ್ಥಿತಿಯಲ್ಲಿ ತಾಲೂಕಿನಾಧ್ಯಂತ ಉತ್ತಮ ಮಳೆಯಾಗಿದ್ದು, ರೈತರ ಮುಖದಲ್ಲಿ ಕಳೆ ಮೂಡಿದ್ದು ಮುಂದಿನ ದಿನಗಳಲ್ಲಿ ಇದೇ ರೀತಿಯಲ್ಲಿ ಮಳೆಯಾಗಲು ಇಂದಿನಿಂದ ರೈತರು ತಮ್ಮ ಬದುಗಳಿಗೆ ಲಾಭದಾಯಕ ಅರಣ್ಯ ಕೃಷಿ ಮತ್ತು ತೋಟಗಾರಿಕ ಕೃಷಿ ಮಾಡುವುದರೊಂದಿಗೆ ಪರಿಸರ ಪೂರಕ ಕೃಷಿ ಮಾಡಿ ಅತಿ ಹೆಚ್ಚು ಲಾಭದೊಂದಿಗೆ ಮಣ್ಣಿನ ಸಂರಕ್ಷಣೆ ಹಾಗೂ ಉತ್ತಮ ಪರಿಸರ ರಕ್ಷಣೆಯಾಗುತ್ತದೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ತಹಶಿಲ್ದಾರ್ ಎಸ್.ಬಿ.ಕೂಡಲಗಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಕ ಶಿವಪ್ಪ ಸುಬೇಧರ್, ಕೃಷಿ ಸಹಾಯಕ ನಿದೇರ್ಶಕ ನಜೀರ್ ಅಹ್ಮದ್, ತೋಟಗಾರಿಕೆ ಸಹಾಯಕ ಹಿರಿಯ ನಿದೇರ್ಶಕ ವಿಶ್ವನಾಥ, ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಕೆ.ಗೋವಿಂದರಾಜ, ಉಪವಲಯ ಅರಣ್ಯಾಧಿಕಾರಿ ಗಿರೀಶ, ಶಿರಸ್ಥೆದಾರ ಎನ್.ಬಾಬು, ಅರಣ್ಯ ಸಂರಕ್ಷಕರಾದ ಅಶೋಕ, ಬಸವನಗೌಡ, ನಗರ ಸಭೆ ನೈರ್ಮಲ್ಯಾಧಿಕಾರಿ ರಂಗಸ್ವಾಮಿ, ಮುಖಂಡರಾದ ಖಾಜಪ್ಪ, ಮಲ್ಲೇಶನಾಯಕ, ಮಹಾದೇವಪ್ಪ, ಮೇಕಾಲಿ ವೀರೇಶ, ಬಂಡ್ರಾಳ್ ಮಲ್ಲಿಕಾರ್ಜುನ, ದುರುಗಪ್ಪ, ಪಾಂಡು ನಾಯಕ, ನಟರಾಜ, ಗೋಪಾಲ ರೆಡ್ಡಿ ಇದ್ದರು.