ತಹಶೀಲ್ದಾರ್ ಆಗಿ ಗುರುಪ್ರಸಾದ್ ಅಧಿಕಾರ ಸ್ವೀಕಾರ

ಸಂಜೆವಾಣಿ ವಾರ್ತೆ
ಹನೂರು ಆ.1:- ತಾಲೂಕಿನ ತಹಶೀಲ್ದಾರ್ ವೈ.ಕೆ ಗುರುಪ್ರಸಾದ್ ಅವರು ಅಧಿಕಾರ ವಹಿಸಿಕೊಂಡರು. ತಾಲೂಕು ತಹಶೀಲ್ದಾರ್ ನೇಮಕ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿಯವರು ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ ಅಧಿಕಾರ ವಹಿಸಿಕೊಂಡರು.
ಈ ಹಿಂದೆ ತಹಶೀಲ್ದಾರ್ ಆನಂದಯ್ಯ ಅವರು ನಿವೃತ್ತಿ ನಂತರ ತೆರವಾಗಿದ್ದ ಸ್ಥಾನಕ್ಕೆ ಪ್ರಭಾರ ತಹಶೀಲ್ದಾರ್ ಆಗಿ ದನಂಜಯ್ ರವರು ಕಾರ್ಯ ನಿರ್ವಾಹಿಸುತ್ತಿದ್ದರು. ಸರ್ಕಾರದಿಂದ ನೇಮಕಗೊಂಡ ನೂತನ ತಹಶೀಲ್ದಾರ್ ಗುರುಪ್ರಸಾದ್ ನೇಮಕ ಮಾಡಲಾಗಿದೆ. ಗುರುಪ್ರಸಾದ್ ಅವರನ ಇಲ್ಲಿನ ಪ್ರಭಾರ ತಹಶೀಲ್ದಾರ್ ಆಗಿ ದನಂಜಯ್ ಆಧಿಕಾರ ಹಸ್ತಾಂತರ ಮಾಡಿ ಮತ್ತು ಉಪ ತಹಶೀಲ್ದಾರ್ ನಾಗೇಂದ್ರ, ರಾಜಸ್ವ ನೀರಿಕ್ಷಕ ಮಹದೇವಸ್ವಾಮಿ ಗ್ರಾಮಧಿಕಾರಿ ಎನ್.ಶೇಷಣ್ಣ, ಕಾವ್ಯ, ಸೌಮ್ಯ, ವಿಜಯಾ, ಮುಜಾಹಿದ್, ಗ್ರಾಮ ಸಹಾಯಕರು, ಸಿಬ್ಬಂದಿಗಳು ನೂತನ ತಹಶೀಲ್ದಾರ್ ವೈ.ಕೆ ಗುರುಪ್ರಸಾದ್ ಸ್ವಾಗತಿಸಿ ಸನ್ಮಾನಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ತಹಶೀಲ್ದಾರ್ ಗುರುಪ್ರಸಾದ್ ಅವರು ಮೊದಲ ಬಾರಿಗೆ ಹನೂರು ತಾಲೂಕಿಗೆ ತಹಶೀಲ್ದಾರಾಗಿ ಬಂದಿರುವುದು ಸಂತಸ ತಂದಿದೆ. ನೂತನ ತಾಲ್ಲೋಕಿನಲ್ಲಿ , ಕಂದಾಯ ಇಲಾಖೆಯಲ್ಲಿ ಸಾಕ್ಷಷ್ಠ ಸಮಸ್ಯೆಗಳು ಇವೆ ಇದು ಸವಾಲಿನ ಕೆಲಸವಾಗಿದೆ ಇವುಗಳಿಗೆ ಸಂಬಂಧಿಸಿದಂತೆ ಈ ಭಾಗದ ಜನರ ಕುಂದು ಕೊರತೆ ಸಮಸ್ಯೆಗಳ ಬಗ್ಗೆ ಆಲಿಸಿ ಬಗೆಹರಿಸಲು ಆದಷ್ಟು ಪ್ರಾಮಾಣಿಕ ಸೇವೆ ಮಾಡುತ್ತೇನೆ ಎಂದು ತಿಳಿಸಿದರು.