ತಹಶೀಲ್ದಾರರಿಂದ ಗ್ರಾಮಸ್ಥರ ಹವಾಲುಗಳ ಸ್ವೀಕಾರ


ಮುಂಡಗೋಡ,ಮಾ.21: ತಾಲೂಕಿನ ನಂದಿಕಟ್ಟಾ ಗ್ರಾ.ಪಂ.ನ ಹುಲಿಹೊಂಡದಲ್ಲಿ ಎರಡನೇ ಗ್ರಾಮ ವಾಸ್ತವ್ಯವನ್ನು ಶನಿವಾರ ಇಲ್ಲಿನ ತಹಸೀಲ್ದಾರ್ ಶ್ರೀಧರ ಮುಂದಲಮನಿ ಅವರು ನಡೆಸಿ ಜಿಲ್ಲಾಧಿಕಾರಿದ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಬಗ್ಗೆ ಗ್ರಾಮಸ್ಥರಿಗೆ ಹೇಳಿದರು.
ಹುಲಿಹೊಂಡದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಈ ವೇಳೆ ಗ್ರಾಮಸ್ಥರಿಂದ ರೈತರ ಅತಿಕ್ರಮಣ, ಹೊಲಗಳಿಗೆ ರಸ್ತೆ, ವೃದ್ಧರ ಪಿಂಚಣಿ ಸೇರಿದಂತೆ 33 ಅಹವಾಲುಗಳನ್ನು ಸ್ವೀಕರಿಸಿದರು. ಅತೀ ಮುಖ್ಯವಾಗಿ ಗ್ರಾಮದಲ್ಲಿ ಗವಟಾನದ ಸಮಸ್ಯೆಯಿದ್ದು ಇದನ್ನು ಸರ್ವ ಮಾಡಿಸಿಕೊಂಡುವಂತೆ ಮತ್ತು ಹೊಲಗಳಿಗೆ ಹೋಗಲು ಗ್ರಾಮ ನಕ್ಷೆಯಲ್ಲಿರುವ ದಾರಿ ಇರುವಂತಹ ಗದ್ದೆಗಳಲ್ಲಿ ಸರ್ವೆ ಮಾಡಿಕೊಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದರು ಅದರಂತೆ ತಹಶೀಲ್ದಾರ ಶ್ರೀದರ ಮುಂದಲಮನಿ ಅವರು ಹೊಲಗಳಿಗೆ ಹೋಗುವ ದಾರಿಯ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಹುಲಿಹೊಂಡ ಗ್ರಾಮದಲ್ಲಿ ಕೆರೆ ಒತ್ತುವರಿ ಮಾಡಿದ ಸ್ಥಳಕ್ಕೆ ಭೇಟಿ ನೀಡಿ ಸರ್ವೇ ನಂ.21ರ 8ಗುಂಟೆ ಗುರುತಿಸಿ ಕೆರೆಯನ್ನು ತೆರವುಗೊಳಿಸಿದರು. ನಂತರ ಗ್ರಾಮದಲ್ಲಿ ಸುತ್ತಾಡಿ ಅಭಿವೃದ್ಧಿ ಬಗ್ಗೆ ಗ್ರಾಮಸ್ಥರ ಜೊತೆ ಸಭೆ ನಡೆಸಿ ಸಮಸ್ಯೆ ಆಲಿಸಿದರು. ವೃದ್ಧರ ಪಿಂಚಣಿ, ಪಡಿತರ ಚೀಟಿ ಸಮಸ್ಯೆಯನ್ನು ಸ್ಥಳದಲ್ಲಿಯೇ ಪರಿಹರಿಸಿದರು.
ಗ್ರಾಮ ವಾಸ್ತವ್ಯದ ಸವಿ ನೆನಪಿಗಾಗಿ ಹುಲುಹೊಂಡ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ತಹಸೀಲ್ದಾರ್ ಅವರು ಸಸಿ ನೆಟ್ಟರು.
ಈ ವೇಳೆ ತಾಲೂಕಾ ಆಡಳಿತವೈಧ್ಯಾಧಿಕಾರಿ ಎಚ್.ಎಪ್‍ಇಂಗಳೆ, ಬಿಇಒ ವಿ.ಎಮ್.ನಡುವಿನಮನಿ, ಆರ್.ಎಫ್.ಓ ಸುರೇಶ ಕುಳ್ಳೊಳ್ಳಿ, ಕಂದಾಯ ನಿರೀಕ್ಷಕ ರಾಘವೇಂದ್ರ ಪಾಟೀಲ, ಗ್ರಾಮಲೆಕ್ಕಾಧಿಕಾರಿ ಸಂಜು ಲಮಾಣಿ, ಪ್ರಭಾರ ಸಿಡಿಪಿಒ ದೀಪಾ ಬಂಗೇರ, ಪಿಡಿಒ ವೆಂಕಪ್ಪ ಲಮಾಣಿ ರಾಘವೇಂದ್ರ ಗಿರಡ್ಡಿ ಹಾಗೂ ಇತರೆ ಅಧಿಕಾರಿಗಳು ಜನಪ್ರತಿನಿಧಿ ಇದ್ದರು. ಶನಿವಾರ ರಾತ್ರಿ ಹುಲಿಹೊಂಡ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ.