ತಹಶೀಲ್ದಾರರಾಗಿ ಅಮರೇಶ್ ಅಧಿಕಾರ ಸ್ವೀಕಾರ


ಸಂಜೆವಾಣಿ ವಾರ್ತೆ
ಕೊಟ್ಟೂರು, ಜು.3: ತಾಲೂಕಿನ ನೂತನ ತಹಶೀಲ್ದಾರರಾಗಿ ಅಮರೇಶ್ ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ಕೊಟ್ಟೂರು ತಾಲೂಕಿನ ತಹಶೀಲ್ದಾರರಾಗಿ ಎಂ ಕುಮಾರಸ್ವಾಮಿ ಕಾರ್ಯ ನಿರ್ವಹಿಸಿದ್ದರು. ಇವರ ವರ್ಗಾವಣೆ ಹಿನ್ನೆಲೆ ನೂತನ ಪ್ರಭಾರಿ ತಹಶೀಲ್ದಾರರಾಗಿ ಅಮರೇಶ್ ಅಧಿಕಾರವನ್ನು ಸ್ವೀಕರಿಸಿದರು, ಇವರು ಮೂಲತಃ ರಾಯಚೂರಿನವರಾಗಿದ್ದಾರೆ.
ತಾಲೂಕು ಆಡಳಿತ ಸಿಬ್ಬಂದಿ ಎಂ. ಕುಮಾರಸ್ವಾಮಿ ಅವರಿಗೆ ಬಿಳ್ಕೊಡುಗೆ ನೀಡಿ, ನೂತನ ತಹಶೀಲ್ದಾರರಾದ ಅಮರೇಶ್ ಅವರನ್ನು ಸ್ವಾಗತಿಸಿದರು.

One attachment • Scanned by Gmail