ತಹಶಿಲ್ದಾರ ಕಚೇರಿಯಲ್ಲಿ ಭಗೀರಥ ಜಯಂತಿ ಆಚರಣೆ

ತಾಳಿಕೋಟೆ:ಮೇ.15: ಪಟ್ಟಣದ ತಹಶಿಲ್ದಾರ ಕಚೇರಿಯಲ್ಲಿ ತಾಲೂಕಾಡಳಿತದ ನೇತೃತ್ವದಲ್ಲಿ ಮಹರ್ಷಿ ಶ್ರೀ ಭಗೀರಥ ಜಯಂತ್ಯೋತ್ಸವವನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ಶ್ರೀ ಭಗೀರಥರ ಭಾವಚಿತ್ರಕ್ಕೆ ಶ್ರೀ ಭಗೀರಥ ಉಪ್ಪಾರ ಸಮಾಜದ ಮುಖಂಡರುಗಳಾದ ಯಮನಪ್ಪಸಾಹುಕಾರ ಮಸರಕಲ್ಲ, ಮಲ್ಲು ಮೇಟಿ ಅವರು ಪುಷ್ಪಾರ್ಚನೆ ಮಾಡುವದರೊಂದಿಗೆ ಮಹಾ ಪೂಜೆ ಸಲ್ಲಿಸಿದರು.
ಈ ಸಮಯದಲ್ಲಿ ಮುಖಂಡರುಗಳಾದ ಯಮನಪ್ಪಸಾಹುಕಾರ ಮಸರಕಲ್ಲ(ಬೊಮ್ಮನಹಳ್ಳಿ), ಮಲ್ಲು ಮೇಟಿ, ಚಂದ್ರ ಶೇಖರ ದೊಡಮನಿ, ಬಸವರಾಜ ಮಸರಕಲ್ಲ, ಸಿ.ಡಿ.ಬಿರಾದಾರ, ಜಗನ್ನಾಥ ಮಸರಕಲ್ಲ, ರವಿ ದೊಡಮನಿ, ರಮೇಶ ಬಿಳೇಭಾವಿ, ರಾಗು ಬಿಳಿಭಾರ, ಬಸವರಾಜ ಮಸರಕಲ್ಲ, ಯಂಕಣ್ಣ ದುಮಗುಂಡಿ, ಚಂದ್ರು ದುಮಗುಂಡಿ, ಹಾಗೂ ತಹಶಿಲ್ದಾರ ಕಚೇರಿಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.