ತಹಶಿಲ್ದಾರರಿಗೆ ಮನವಿ ಸಲ್ಲಿಸಿದ ತಾಲೂಕ ವಿಶ್ವಕರ್ಮ ಸಂಘ

????????????????????????????????????

ಸಿರುಗುಪ್ಪ, ಜ.02: ನಗರದ ತಹಶಿಲ್ದಾರ ಕಛೇರಿಯಲ್ಲಿ ತಾಲೂಕು ವಿಶ್ವಕರ್ಮ ಸಂಘದ ವತಿಯಿಂದ ಪ್ರತಿವರ್ಷ ಜನವರಿ.01ರಂದು ಜಕಣಾಚಾರಿ ಸಂಸ್ಮರಣ ದಿನವನ್ನಾಗಿ ಆಚರಿಸುವಂತೆ ಒತ್ತಾಯಿಸಿ ತಹಶಿಲ್ದಾರ್ ಬಿ.ಎಸ್.ಕೂಡಲಗಿಯವರಿಗೆ ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ಎ.ಕಾಳನಗೌಡ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಅವರು ರಾಜ್ಯದ ಅನೇಕ ದೇವಸ್ಥಾನಗಳಲ್ಲಿ ಕಂಡುಬರುವ ವಾಸ್ತುಶಿಲ್ಪಗಳಲ್ಲಿ ಅಮರಶಿಲ್ಪಿ ಜಕಣಾಚಾರಿಯವರ ಕೊಡುಗೆ ಮಹತ್ವವಾಗಿದ್ದು ಮುಂದಿನ ದಿನಗಳಲ್ಲಿ ಪ್ರತಿವರ್ಷ ಜನವರಿ.01ರಂದು ಜಕಣಾಚಾರಿ ಸಂಸ್ಮರಣ ದಿನವನ್ನಾಗಿ ಸರ್ಕಾರದ ವತಿಯಿಂದಲೇ ಆಚರಿಸುವಂತೆ ಒತ್ತಾಯಿಸಿ ಮಾನ್ಯ ಮುಖ್ಯಮಂತ್ರಿಗಳ ಕಛೇರಿಗೆ ಹಾಗೂ ರಾಜ್ಯದಲ್ಲಿ 30 ಜಿಲ್ಲೆಗಳಲ್ಲಿ ಕುಲ ಕಸುಬುಗಳನ್ನು ನಂಬಿ ಬದುಕುತ್ತಿರುವ ವಿಶ್ವಕರ್ಮ ಸಮಾಜದ ಕುಟುಂಬಗಳು ಕೋವಿಡ್-19ನಿಂದಾಗಿ ಅಭದ್ರತೆಯ ಜೀವನ ಸಾಗಿಸುವಂತಾಗಿದೆ ಕಾರಣ ಸರ್ಕಾರದ ಸಹಾಯ ಧನ ಮಾಸಿಕ 5ಸಾವಿರ ಸಹಾಯ ಧನವನ್ನು ಸರ್ಕಾರದಿಂದ ಶೀಘ್ರವಾಗಿ ಕೊಡಿಸುವಂತಹ ಕೆಲಸ ಮಾಡಬೇಕೆಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷರು ಕೆ.ಪಿ.ನಂಜುಂಡಿಯವರಿಗೆ ತಹಶಿಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು
ತಾಲೂಕು ವಿಶ್ವಕರ್ಮ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಮೌನೇಶ ಆಚಾರಿ, ಮುಖಂಡರಾದ ಗಂಗಾಧರ ಆಚಾರಿ, ಮನೋಹರ, ಬಸವರಾಜ, ಬಿ.ಮೌನೇಶ ಆಚಾರಿ, ಮರೆಗೌಡ, ಇದ್ದರು.

Spread the love