ತವಾ ಪಲಾವ್

ಬೇಕಾಗುವ ಸಾಮಗ್ರಿಗಳು

*ಬಾಸುಮತಿ ಅಕ್ಕಿ – ೧ ಬೌಲ್
*ಹುರುಳಿ ಕಾಯಿ – ೧/೪ ಕೆ.ಜಿ
*ಹಸಿ ಬಟಾಣಿ – ೧೦೦ ಗ್ರಾಂ
*ಕ್ಯಾರೆಟ್ – ೧
*ದಪ್ಪ ಮೆಣಸಿನಕಾಯಿ – ೧
*ಬ್ಯಾಡಗಿ ಮೆಣಸಿನಕಾಯಿ – ೨
*ಬೆಳುಳ್ಳಿ – ೨ ಚಮಚ
*ಕೊತ್ತಂಬರಿ ಸೊಪ್ಪು – ೧೦ ಗ್ರಾಂ
*ಜೀರಿಗೆ – ೧ ಚಮಚ
*ಈರುಳ್ಳಿ – ೧
*ಟೊಮೆಟೊ – ೧
*ಶುಂಠಿ ಬೆಳುಳ್ಳಿ ಪೇಸ್ಟ್ – ೧ ಚಮಚ
*ಅರಿಶಿಣ – ೧/೨ ಚಮಚ
*ಪಾವ್ ಬಾಜಿ ಮಸಾಲ – ೧ಚಮಚ
*ನಿಂಬೆಹಣ್ಣು – ೧/೨
*ಉಪ್ಪು – ೧ ಚಮಚ
*ಎಣ್ಣೆ – ೧೫೦ ಮಿ.ಲೀ
*ಬೀನ್ಸ್ – ೧/೪ ಕೆ.ಜಿ

ಮಾಡುವ ವಿಧಾನ:
ಬ್ಯಾಡಗಿ ಮೆಣಸಿನಕಾಯಿ, ಶುಂಠಿ ಬೆಳುಳ್ಳಿ ಪೇಸ್ಟ್‌ನ್ನು ರುಬ್ಬಿ ಕೊಳ್ಳಿ. ಪ್ಯಾನ್‌ಗೆ ಎಣ್ಣೆ ಹಾಕಿ ಕಾದ ಮೇಲೆ ಜೀರಿಗೆ, ಈರುಳ್ಳಿ ಹಾಕಿ ಹುರಿಯಿರಿ. ಇದಕ್ಕೆ ಬೀನ್ಸ್, ಕ್ಯಾರೆಟ್, ದಪ್ಪ ಮೆಣಸಿನಕಾಯಿ, ಟೊಮೆಟೊ, ಉಪ್ಪು ಹಾಕಿ ಸ್ವಲ್ಪ ಕೈಯಾಡಿಸಿ, ಬೇಯಲು ಬಿಡಿ. ನಂತರ ರುಬ್ಬಿಕೊಂಡ ಬ್ಯಾಡಗಿ ಮೆಣಸಿನಕಾಯಿ, ಶುಂಠಿ ಬೇಳುಳ್ಳಿ ಪೇಸ್ಟ್, ಅರಿಶಿಣ ಸೇರಿಸಿ ಬೇಯಿಸಿ. ಬಟಾಣಿ, ಪಾವ್ ಬಾಜಿ ಮಸಾಲ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಬಾಸುಮತಿ ಅನ್ನ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ನಿಂಬೆರಸ, ಕೊತ್ತಂಬರಿಸೊಪ್ಪು ಹಾಕಿದರೆ ತವಾ ಪಲಾವ್ ಸವಿಯಲು ಸಿದ್ಧ.