ತವಾ ಚಿಕನ್ ಫ್ರೈ

ಬೇಕಾಗುವ ಸಾಮಗ್ರಿಗಳು

*ಬೋನ್‌ಲೆಸ್ ಚಿಕನ್ – ೧/೪ ಕೆ.ಜಿ
*ಈರುಳ್ಳಿ – ೨
*ಟೊಮೆಟೋ – ೧
*ಹಸಿರು ಮೆಣಸಿನಕಾಯಿ – ೩
*ದಪ್ಪ ಮೆಣಸಿನಕಾಯಿ – ೧
*ಶುಂಠಿ, ಬೆಳ್ಳುಳ್ಳಿ ಪೇಸ್ಟ್ – ೧ ಚಮಚ
*ನಿಂಬೆರಸ – ೧/೨ ಚಮಚ
*ಕೊತ್ತಂಬರಿ ಸೊಪ್ಪು – ಸ್ವಲ್ಪ
*ತಂದೂರಿ ಮಸಾಲ – ೧ ಚಮಚ
*ಅರಿಶಿಣ – ೧ ಚಮಚ
*ಅಚ್ಚಖಾರದ ಪುಡಿ – ೪ ಚಮಚ
*ಉಪ್ಪು – ರುಚಿಗೆ ತಕ್ಕಷ್ಟು
*ಎಣ್ಣೆ – ೫೦ ಗ್ರಾಂ

ಮಾಡುವ ವಿಧಾನ ;

ಪ್ಯಾನ್‌ಗೆ ಎಣ್ಣೆ ಹಾಕಿ. ಕಾದ ನಂತರ ಈರುಳ್ಳಿ, ಚಿಕನ್ ಪೀಸ್, ಅರಿಶಿಣವನ್ನು ಹಾಕಿ ಹದವಾಗಿ ಹುರಿದುಕೊಳ್ಳಿ. ಇದಕ್ಕೆ ಟೊಮೆಟೋ, ಉದ್ದಕ್ಕೆ ಕಟ್ ಮಾಡಿದ ಹಸಿರು ಮೆಣಸಿನಕಾಯಿಯನ್ನು ಹಾಕಿ ಬಾಡಿಸಿಕೊಳ್ಳಿ. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅಚ್ಚಖಾರದ ಪುಡಿ, ತಂದೂರಿ ಮಸಾಲ ಹಾಕಿ ಫ್ರೈ ಮಾಡಿ. ದಪ್ಪ ಮೆಣಸಿನಕಾಯಿ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮುಚ್ಚಳ ಮುಚ್ಚಿ ಬೇಯಿಸಿ. ಬೆಂದ ನಂತರ ನಿಂಬೆರಸವನ್ನು ಹಿಂಡಿದರೆ, ಬಿಸಿ ಬಿಸಿಯಾದ ತವಾ ಚಿಕನ್ ಫ್ರೈ ರೆಡಿ.