ತವರೂರಿನ ಋಣ ತಿರಿಸಲು ಎಷ್ಟು ಜನ್ಮ ತಾಳಿದರು ಸಾಲದು : ಡಿ.ಎನ್.ಅಕ್ಕಿ

ಶಹಾಪುರ:ನ.21:ಚಿತ್ರಕಲಾ ಶಿಕ್ಷಕರಾಗಿ, ಪ್ರತಿಯೊಬ್ಬರ ಮಕ್ಕಳ ಮನಸಿನಾಳದಲ್ಲಿ ಚಿತ್ತಾರ ಮೂಡಿಸಿದ ನಿವೃತ್ತ ಶಿಕ್ಷಕ, ರಾಜ್ಯೊತ್ಸವ ಪುರಸೃತರಾದ ಡಿ.ಎನ್.ಅಕ್ಕಿಯವರ ತವರೂರಾದ ತಾಲೂಕಿನ ಗೋಗಿ ಗ್ರಾಮದಲ್ಲಿ ಜನತೆ ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಿದರು.

ವಲಯ ಕನ್ನಡ ಸಾಹಿತ್ಯ ಪರಿಷತ್ ಆಶ್ರೆಯದಲ್ಲಿ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮ ಸಡಗರ ಸಂಭ್ರಮಗಳಿಂದ ನೆಡೆಯಿತು. ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಮಾತನಾಡಿದ ಅಕ್ಕಿಯವರು ನನ್ನೂರಿನ ಋಣನುಬಂಧ ಮುಕ್ತಿಗೆ ಎಷ್ಟೋ ಜನ್ಮ ತಾಳಿಸಿದರೂ ಸಾಲದು ಹುಟ್ಟು ಸಾವುಗಳ ಮಧ್ಯದ ಬದುಕಿನಲ್ಲಿ ನನ್ನೋಡೆನೆ ಆಟವಾಡಿದ ಬೆಸೆದು ಹೊದ ಗೆಳತೆನದ ಸಂಭಂಧಗಳು ಶಾಶ್ವತವಾಗಿ ನೆನಪಿನಂಗಳದಲ್ಲಿ ತೇಲುತ್ತಿವೆ. ನನ್ನೂರಿನ ಋಣದಿಂದ ಸಹಕಾರಗಳಿಂದ ರಾಜ್ಯೋತ್ಸವ ಪ್ರಶಸ್ತಿಗೆ ಸಂದ ಗೌರವಾಗಿದೆ ಎಂದು ಅಂತರಾಳದ ಸಂತೋಷದ ಕ್ಷಣಗಳನ್ನು ಅವರು ಮೆಲಕು ಹಾಕಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಲಯ ಕಸಾಪ ಅಧ್ಯಕ್ಷರಾದ ಮಲ್ಲಣಗೌಡ ಪೋಲಿಸ್ ಪಾಟೀಲರವರು ಅಕ್ಕಿಯವರ ರಾಜ್ಯೋತ್ಸವ ಪ್ರಶಸ್ತಿ ನಮ್ಮೂರಿನ ಕೀರಟಾಗಿದೆ ಎಂದು ಮಾರ್ಮಿಕವಾಗಿ ಮಾತನಾಡಿದರು.

ವೇದಕೆಯಲ್ಲಿ ಹಿರಿಯ ಮುಖಂಡರಾದ, ಬಸವರಾಜಪ್ಪಗೌಡ ತಂಗಡಿಗಿ, ಮಾಣಿಕರಡ್ಡಿ ದೇವಣಗಾಂವ್, ಚಂದಪ್ಪ ತಾಯಮಗೊಳ. ಡಾ,ಅಬ್ದುಲ ಕರಿಂ ಕನ್ಯಾಕೊಳೂರ. ಶರಣಗೌಡ ಬೈರಡ್ಡಿ, ಭೀಮರಡ್ಡಿ ಪೋಲಿಸ್ ಪಾಟೀಲ್. ಚಂದ್ರಶೆಖರ ದೊತ್ರೆ. ಭೀಮರಡ್ಡಿ ಮಲ್ಹಾರ, ಚಂದಪ್ಪ ಸಿತ್ನಿ,ಮಾನಸಿಂಗ ಚೌವಾಣ್, ವೆಂಕಟೇಶ ಮಂಟೋಳಿ. ಮಾಹಾವೀರ ಅಕ್ಕಿ. ಈರಣ್ಣ ದೊತ್ರೆ. ಸೇರಿದಂತೆ ಅಕ್ಕಿ ಬಳಗ. ಮತ್ತು ಶಿಷ್ಯ ವೃಂದ ಸೇರಿದಂತೆ ಅನೆಕ ಗಣ್ಯರು ಗ್ರಾಮದ ನಾಗರಿಕರು, ಪಾಲ್ಗೊಂಡಿದ್ದರು.ಅಮರೇಶ ಪೂಜಾರಿ ಸ್ವಾಗತಿಸಿದರು. ಶರಣು ಬೈರಡ್ಡಿ ಕಾರ್ಯಕ್ರಮ ನೀರೂಪಿಸಿದರು. ಗುರುನಾಥ ಮಾನು ಸರ್ವರನ್ನು ವಂದಿಸಿದರು.