ತವರೂರಿಗೆ ಬಂದ ಸಂತಸ: ಸಿ.ಎಂ.

ಕುಂದಗೋಳ,ಮಾ15 : ನನ್ನ ತವರೂರಾದ ಕಮಡೋಳ್ಳಿ ಗ್ರಾಮಕ್ಕೆ ಬಂದಿರುವುದು ತೀವ್ರ ಸಂತಸ ತಂದಿದೆ. ನನಗೆ ಈ ಊರಿನ ಬಗ್ಗೆ ಅಪಾರ ಗೌರವ ಇದೆ. ಈ ಊರಿನ ಮಣ್ಣಿನ ಗುಣವೇ ಅಂತಹದ್ದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದರು.
ಅವರು ಕಮಡೊಳ್ಳಿ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಜಲ ಜೀವನ ಮಿಶನ್, ವಿದ್ಯಾ ನಿಧಿ, ಬಡವರಿಗೆ ಆಶ್ರಯ ಮನೆ ನಿರ್ಮಾಣ, ಸಾಮಾಜಿಕ ನ್ಯಾಯ ಸಿಗುವ ನಿಟ್ಟಿನಲ್ಲಿ ಎಸ್ ಸಿ/ಎಸ್ ಟಿ ಮೀಸಲಾತಿ ನಲ್ಲಿ ಹೆಚ್ಚಳ, ಎಲ್ಲದರ ಬಗ್ಗೆ ಮಾಹಿತಿ ನೀಡಿದರು. ಬರುವ ದಿನಮಾನಗಳಲ್ಲಿ ಕಮಡೋಳ್ಳಿ ಗ್ರಾಮವನ್ನು ದತ್ತು ತೆಗೆದುಕೊಂಡು ಕೆಲಸ ಕಾರ್ಯಗಳನ್ನು ಮಾಡುತ್ತೇನೆಂದು ಹೇಳಿದರು. ನವ ಕರ್ನಾಟಕದ ನಿರ್ಮಾಣ ಮಾಡಲು ಹಲವಾರು ಯೋಜನೆಯ ಅಡಿಪಾಯ ಹಾಕಿದ್ದೇನೆ ಮತ್ತು ಒಳ್ಳೆ ಕೆಲಸ ಮಾಡಿ ಒಳ್ಳೆ ಹೆಸರು ತರುತ್ತೇನೆಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಲೋಚನೆಶ್ವರ ಮಠದ ಶ್ರೀ ರಾಚುಟೇಶ್ವರ ದೇವರು, ಇಂಚಗಿರಿ ಮಠದ ಶ್ರೀ ವಾಲಿ.ಮಹಾರಾಜರು, ಕಲ್ಯಾಣ ಪುರ ಮಠದ ಅಭಿನವ ಬಸವಣ್ಣಜ್ಜನವರು, ವಹಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮದ ಗುರು-ಹಿರಿಯರು, ಮುಂಖಡರು, ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.