ತವರಲ್ಲಿ ಲಕ್ನೊಗೆ ಭರ್ಜರಿ ಜಯ

ಲಕ್ನೊ: ಕೆ.ಎಲ್.ರಾಹುಲ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಲಕ್ನೊ ತಂಡ ಚೆನ್ನೈ ವಿರುದ್ಧ 8 ವಿಕೆಟ್ಗಳ ಗೆಲುವು ದಾಖಲಿಸಿದೆ.
ಇಲ್ಲಿನ ಏಕನಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಕಲೆ ಹಾಕಿತು. ಲಕ್ನೊ ತಂಡ 19 _ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತು.
177 ರನ್ ಗುರಿ ಬೆನ್ನತ್ತಿದ ಲಕ್ನೊ ತಂಡಕ್ಕೆ ಕೆ.ಎಲ್. ರಾಹುಲ್ ಮತ್ತು ಕ್ವಿಂಟಾನ್ ಡಿಕಾಕ್ ಮೊದಲ ವಿಕೆಟ್ಗೆ 134 ರನ್ ಸೇರಿಸಿದರು.
ಕ್ವಿಂಟಾನ್ ಡಿಕಾಕ್ 54 ರನ್, ಕೆ.ಎಲ್.ರಾಹುಲ್ 82ರನ್ ಹೊಡೆದರು.
ನಿಕೊಲೊಸ್ ಪೂರಾನ್ ಅಜೇಯ 23 ಮತ್ತು ಸ್ಟೋಯ್ನಿಸ್ ಅಜೇಯ 8 ರನ್ ಹೊಡೆದರು.
ಚೆನ್ನೈ ಪರ ಮುಸ್ತಾಫಿಜುರ್ ಮತ್ತು ಪತಿರನ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೆರವಿನಿಂದ ಚೆನ್ನೈ ತಂಡ ಲಕ್ನೊಗೆ 177 ರನ್‍ಗಳ ಗೆಲುವಿನ ಗುರಿ ನೀಡಿತ್ತು.

ಚೆನ್ನೈ ತಂಡ ಓಪನರ್ ರಚಿನ್ ರವೀಂದ್ರ (0) ಅವರ ವಿಕೆಟ್ ಕಳೆದುಕೊಂಡಿತು. ನಾಯಕ ಋತುರಾಜ್ ಗಾಯಕ್ವಾಡ್ (17ರನ್), ಶಿವಂ ದುಬೆ 3ರನ್, ಸಮೀರ್ ರಿಜ್ವಿ 1ರನ್ ಗಳಿಸಿದರು. ರವೀಂದ್ರ ಜಡೇಜಾ (40ಎಸೆತ, 5 ಬೌಂಡರಿ, 1ಸಿಕ್ಸರ್) ಅಜೇಯ 57 ರನ್ ಹೊಡೆದರು. ಕೊನೆಯಲ್ಲಿ ಬಂದ ಮೊಯಿನ್ ಅಲಿ 20 ಎಸೆತದಲ್ಲಿ 30 ರನ್ ಹೊಡೆದರು. ಧೋನಿ 3 ಬೌಂಡರಿ, 2 ಜೇಯ 28 ರನ್ ಹೊಡೆದರು.

ಲಕ್ನೊ ಪರ ಕೃಣಾಲ್ ಪಾಂಡ್ಯ 16ಕ್ಕೆ 2, ಮೊಹ್ಸಿನ್, ಯಶ್ ಠಾಕೂರ್, ರವಿ ಬಿಷ್ಣೋಯಿ ಮತ್ತು ಸ್ಟೋಯ್ನಿಸ್ ತಲಾ 1 ವಿಕೆಟ್ ಪಡೆದರು.