ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ: ಜು.24:- ತಳ ಸಮುದಾಯಗಳಿಗೆ ಡಿ.ದೇವರಾಜ್ ಅರಸು ರವರು ಆಶ್ರಯದಾತರಾಗಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿಳಿಸಿದರು.
ಪಟ್ಟಣದ ಎಸ್ ಪಿ ಆರ್ ಕಾಲೋನಿಯಲ್ಲಿ ಪೌರ ಕಾರ್ಮಿಕ ಸಮುದಾಯದವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಡಿ.ದೇವರಾಜ್ ಅರಸು ರವರು ತನ್ನ ಆಡಳಿತಾತ್ಮಕ ದಿನಗಳಲ್ಲಿ ಪ್ರತಿ ತಳ ಸಮುದಾಯಗಳಿಗೂ ಆಶ್ರಯದಾತರಾಗಿದ್ದರು. ಸಂವಿಧಾನದಡಿಯಲ್ಲಿ ಪ್ರತಿ ಸಮುದಾಯಕ್ಕೂ ಸಾಮಾಜಿಕ, ರಾಜಕೀಯ ಸ್ಥಾನಮಾನ ಕಲ್ಪಿಸಿದ್ದರು. ಪೌರ ಕಾರ್ಮಿಕ ಸಮುದಾಯದ ಐ.ಪಿ.ಡಿ ಸಾಲಪ್ಪ, ವೆಂಕಟಪ್ಪ ಸೇರಿದಂತ್ತೆ ಇತರೆ ನಾಯಕರನ್ನು ಸಚಿವರನ್ನಾಗಿ ಮಾಡಿದ್ದರು ಹಾಗೂ ಕಾಂಗ್ರೆಸ್ ಪಕ್ಷ ಮೈಸೂರಿನ ನಾರಾಯಣ ರವರನ್ನು ಮೇಯರ್ ಆಗಿ ಮಾಡಿದೆ ಎಂದರು.
ನಾನು ಪೌರ ಕಾರ್ಮಿಕ ಸಮುದಾಯದ ಜೊತೆ ಸಾಕಷ್ಟು ಒಡನಾಟ ಹೊಂದಿದ್ದೇನೆ. ಅವರುಗಳ ಬದುಕನ್ನು ಹತ್ತಿರದಿಂದ ಕಂಡಿದ್ದೇನೆ. ನೀವುಗಳು ಜಾಗೃತಿ ಹೊಂದಿದ್ದಾಗ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ ಪೌರ ಕಾರ್ಮಿಕ ಸಮುದಾಯವು ತನ್ನ ಕಾಯಕ ನಿಷ್ಠೆ ಮೂಲಕ ಇತರರಿಗೆ ಮಾದರಿಯಾಗಿದೆ. ನೀವುಗಳು ಒಗ್ಗಟಿನಿಂದ ಸಂಘಟನೆಯದಾಗ ಮಾತ್ರ ನಿಮ್ಮ ಹಕ್ಕು ಮತ್ತು ಸವಲತ್ತುಗಳನ್ನು ಪಡೆಯಲು ಸಾಧ್ಯ. ನಿಮ್ಮ ಅಭಿವೃದ್ಧಿಗೆ ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದರು.
ಗ್ರಾಮದ ಯಜಮಾನರಾದ ಸಿ.ರಾಜು ಮಾತನಾಡಿ ಎಚ್.ವಿಶ್ವನಾಥ್ ರವರು ಲೋಕಸಭಾ ಸದಸ್ಯರಾಗಿದ್ದಾಗ ನಮ್ಮ ಗ್ರಾಮಕ್ಕೆ ಸಾಕಷ್ಟು ಅನುದಾನ ನೀಡಿ ಸಮುದಾಯ ಭವನ ನಿರ್ಮಿಸಿಕೊಟ್ಟಿದ್ದಾರೆ.ಈ ಭವನವು ಇಂದು ನಮ್ಮ ಮಕ್ಕಳ ವಿದ್ಯಾಭ್ಯಾಸದ ಕೇಂದ್ರವಾಗಿದೆ ಇದಕ್ಕೆ ಅಬಾರಿಯಾಗಿದ್ದೇವೆ ಹಾಗೂ ನಮ್ಮ ಗ್ರಾಮದಲ್ಲಿ ಸ್ಥಳವಕಾಶವಿದ್ದು ಹೆಚ್ಚುವರಿ ಸಮುದಾಯ ಭವನ ನಿರ್ಮಾಣಕ್ಕೆ ಮತ್ತು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹುಣಸೂರು ಡಿ.ಕುಮಾರ, ಸೀಗೂರು ವಿಜಯ್ ಕುಮಾರ,ನೇರಳ ಕುಪ್ಪೆ ನವೀನ್,ಶಿವಣ್ಣ ಭೂತನಳ್ಳಿ, ಆರ್.ಡಿ.ಚಂದ್ರು, ಪುಟ್ಟಯ್ಯ, ಗ್ರಾಮ ಯಜಮಾನ ರಂಗರಾಜ್, ಕಾರ್ಯದರ್ಶಿ ರಘು,ಮಹೇಶ್,ರವಿ,ಮಹದೇವ್, ಅರ್ಮುಗಂ,ಬಾಲು, ಶ್ರೀನಿವಾಸ್, ರಾಮು,ನಾಗರಾಜ್, ಮಂಜುನಾಥ್,ಸುಬ್ಬಣ್ಣ,ಪಳನಿ,ಲವ, ಕಾರ್ತಿಕ್,ಆನಂದ,ಭದ್ರ ಕುಮಾರ ಸೇರಿದಂತ್ತೆ ಇತರರು ಹಾಜರಿದ್ದರು.