ತಳವಾರ ಸಮುದಾಯದಿಂದ ಶಾಸಕ ಶ್ರೀಮಂತ ಪಾಟೀಲ ಅವರಿಗೆ ಸನ್ಮಾನ

ಕಾಗವಾಡ :ನ.15: ಹಿಂದುಳಿದ ಸಮುದಾಯವಾಗಿರುವ ತಳವಾರ ಸಮಾಜಕ್ಕೆ ಎಸ್‍ಟಿ ಮೀಸಲಾತಿ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಿರುವ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹಾಗೂ ಶೀತಲಗೌಡಾ ಪಾಟೀಲ ಅವರನ್ನು ತಾಲೂಕಿನ ತಳವಾರ ಸಮಾಜ ಬಾಂಧವರು ಸತ್ಕರಿಸಿ ಸನ್ಮಾನಿಸಿ ಗೌರವಿಸಿದರು,

ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರು ಸೋಮವಾರ ದಿ. 14 ರಂದು ಸ್ವತಃ ತಹಶೀಲ್ದಾರ ಕಾರ್ಯಲಯಕ್ಕೆ ಆಗಮಿಸಿ, ತಾಲೂಕಾ ತಳವಾರ ಸಮಾಜದವರಿಗೆ ಎಸ್‍ಟಿ ಜಾತಿ ಪ್ರಮಾಣ ಪತ್ರಗಳನ್ನು ವಿತರಿಸಿದರು. ಅದೇ ಸ್ಥಳದಲ್ಲಿ ಸಮಾಜದ ವತಿಯಿಂದ ಶಾಸಕರನ್ನು ಹಾಗೂ ಪಿಎಲ್‍ಡಿ ಬ್ಯಾಂಕಿನ ಅಧ್ಯಕ್ಷ ಶೀತಲಗೌಡ ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಮಯದಲ್ಲಿ ಶೀತಲಗೌಡಾ ಪಾಟೀಲ ಮಾತನಾಡಿ, ಇಲ್ಲಿಯವರೆಗೆ ಯಾವುದೇ ಶಾಸಕರು ತಹಶೀಲ್ದಾರ ಕಾರ್ಯಾಲಯಕ್ಕೆ ಆಗಮಿಸಿ, ಫಲಾನುಭವಿಗಳಿಗೆ ಜಾತಿ ಪ್ರಮಾಣ ಪತ್ರಗಳನ್ನು ವಿತರಿಸುತ್ತಿರುವುದು ಇದೇ ಮೊದಲು, ಇದು ಅವರ ಕಾರ್ಯ ವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದರು.
ಸಮಾಜದ ಮುಖಂಡ ಸುರೇಶ ಕೋಳಿ ಮಾತನಾಡುತ್ತ ನಮ್ಮ ಮನವಿಗೆ ಸ್ಪಂದಿಸಿ, ತಳವಾರ ಸಮಾಜವನ್ನು ಎಸ್‍ಟಿ ಸಮುದಾಯಕ್ಕೆ ಸೇರ್ಪಡೆಗೊಳಿಸಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ, ಪ್ರಾಮಾಣಿಕ ಪ್ರಯತ್ನ ಮಾಡಿರುವ ಶ್ರೀಮಂತ ಪಾಟೀಲರ ಅವರನ್ನು ನಾವೆಂದು ಮರೆಯಲು ಸಾಧ್ಯವಿಲ್ಲ. ಸಮಾಜದ ವತಿಯಿಂದ ಅವರನ್ನು ಅಭಿನಂದಿಸುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಭಗವಂತ ತಳವಾರ, ಸುರೇಶ ಕೋಳಿ, ಅಪ್ಪಾಸಾಬ ಸನದಿ, ಮಾರುತಿ ಸನದಿ, ರಾಯಪ್ಪಾ ಕೋಳಿ, ಅಶೋಕ ಕೋಳಿ, ಪದ್ಮಣ್ಣ ತಳವಾರ, ಸಚೀನ ಮಿರ್ಜೆ, ಅಶೋಕ ತಳವಾರ, ದೀಪಕ ತಳವಾರ, ಪ್ರಲ್ಹಾದ ಕೋಳಿ, ಪುರಂದರ ತಳವಾರ, ಸಂದೀಪ ಕೋಳಿ, ಶ್ರೀಶೈಲ ಹೆಗಡೆ, ಬಂಡು ಸನದಿ ಸೇರಿದಂತೆ ಅನೇಕ ಸಮಾಜದ ಮುಖಂಡರು ಉಪಸ್ಥಿತರಿದ್ದರು.