ತಳವಾರ ಸಮುದಾಯಕ್ಕೆ ಶೀಘ್ರ ಎಸ್ಟಿ ಪ್ರಮಾಣ ಪತ್ರ: ಸವದಿ ಭರವಸೆ

ಕಲಬುರಗಿ,ಸೆ.7- ತಳವಾರ, ಪರಿವಾರ ಸಮುದಾಯಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಕುರಿತಂತೆ ಅವರ ಪ್ರಮುಖ ಬೇಡಿಕೆಯ ಬಗ್ಗೆ ಸರ್ಕಾರ ಗಮನ ಹರಿಸಿದ್ದು, ಆದಷ್ಟು ಬೇಗ ಈ ಸಮುದಾಯಕ್ಕೆ (ಎಸ್ಟಿ) ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹೇಳಿದರು.
ನಗರಕ್ಕೆ ಇಂದು ಭೇಟಿ ನೀಡಿದ ಡಿಸಿಎಂ ಸವದಿ ಅವರನ್ನು ತಳವಾರ ಪರಿವಾರ ಎಸ್ಟಿ ಹೋರಾಟ ಸಮಿತಿ ನಿಯೋಗ ಸಲ್ಲಿಸಿದ ಮನವಿ ಪತ್ರವನ್ನು ಸ್ವಿಕರಿಸಿ ಮಾತನಾಡಿದ ಅವರು, ಅತಿ ಶಿಘ್ರವೇ ಎಸ್ಟಿ ಪ್ರಮಾಣ ಪತ್ರ ತಳವಾರ ಸಮುದಾಯಕ್ಕೆ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರು, ತಳವಾರ, ಪರಿವಾರದ ಸಮುದಾಯಗಳಿಗೆ ಎಸ್ಟಿ ಪ್ರಮಾಣ ಪತ್ರ ನೀಡುವ ಮೂಲಕ ಸಮಾಜಿಕ ನ್ಯಾಯ ದೊರಕಿಸಿಕೊಡುವಂತೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದರೆ ಮತ್ತು ನನ್ನ ಗಮನಕ್ಕೆ ತಂದಿದ್ದಾರೆ ಎಂದ ಲಕ್ಷ್ಮನ ಸವದಿ ಅವರು, ಈ ಸಮುದಾಯಗಳಿಗೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡುವಂತೆ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ನಿಯೋಗಕ್ಕೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿಡಾ.ಸದಾ9ರ ರಾಯಪ್ಪ , ರಾಜೇಂದ್ರ ರಾಜವಾಳ, ರವಿ ಸಣ್ಣ ಸಂತಮ್, ಬಿ.ಸಿ ಪಾಟೀಲ್ , ಚಂದ್ರಶೇಖರ ಜಮಾದಾರ ವಕೀಲರು, ದೇವಾನಂದ್ ಆರ್ ಸೊಪ್ಪು ,ದೇವೇಂದ್ರ ಚಿಗರಳ್ಳಿ, ಶಿವು ಸುಣಗಾರ, ಸೈಬಣ್ಣ ಜಾಲಗಾರ, ದಿಗಂಬರ ಕಾಡಪ್ಪಗೋಳ, ಶರಣು ಕೋಲಿ, ದಿಗಂಬರ ಡಾಂಗೆ, ಚಂದ್ರಕಾಂತ್ ಗಂವ್ಹಾರ ,ಅನಿಲ ಕಾಮಣ್ಣ ವಚ್ಚಾ, ಇನ್ನಿತರರು ಉಪಸ್ಥಿತರಿದ್ದರು.