ತಳಕಲ್ ಪ್ರಯಾಣಿಕರ ಗೋಳು ಕೇಳುವವರಾರು?


ಕುಕನೂರು, ಏ.24 :  ತಾಲೂಕಿನ  ತಳಕಲ್ ಗ್ರಾಮದ ಪ್ರಯಾಣಿಕರ ತೊಂದರೆಯನ್ನು ಸಂಬಂಧಿಸಿದ ಅಧಿಕಾರಿಗಳು  ಪರಿಹಾರ ಕಲ್ಪಿಸಲು  ಕ್ರಮ ಕೈಗೊಳ್ಳಬೇಕೆಂದು ಸಮಾಜ ಸೇವಕ ಶಿವಣ್ಣ ರಾಯರೆಡ್ಡಿ ಆಗ್ರಹಿಸಿದ್ದಾರೆ.    
ಈ ಕುರಿತು ಪ್ರಕಟಣೆ ನೀಡಿರುವ ಅವರು,     ತಳಕಲ್ ಗ್ರಾಮದಲ್ಲಿ ಸರ್ಕಾರ ಬಸ್ ನಿಲ್ದಾಣ ಕಾಮಗಾರಿ ಮುಗಿದಿದೆ ಆದರೆ ನಿಲ್ದಾಣ ಇನ್ನೂ ಉದ್ಘಾಟನೆ ಆಗಿಲ್ಲ. ಅನೇಕ ಜನಪ್ರತಿನಿಧಿಗಳು ರಾಜಕೀಯ ಉದ್ದೇಶ ಕೆ ಗ್ರಾಮಕ್ಕೆ ಬರುತ್ತಾರೆ ಆದರೆ ಪ್ರಯಾಣಿಕರ ಗೋಳು ಕೇಳುವರಿಲ್ಲ. ಕೊಪ್ಪಳ ಕಡೆಗೆ ಹೋಗುವ ನಿಲ್ದಾಣದ ಒಳಗೆ ಬರಲು ರಸ್ತೆ ಅಡೆತಡೆ ಆಗುತ್ತದೆ, ಗದಗ ಕಡೆಗೆ ಹೋಗುವ ಬಸ್ ಗಳು ಮಾತ್ರ ನಿಲ್ದಾಣದಲ್ಲಿ ನಿಲುಗಡೆ ಆಗುತ್ತವೆ, ಕೊಪ್ಪಳ ಕಡೆ ಹೋಗುವ ಪ್ರಯಾಣಿಕರ ಗೋಳು ಹೇಳ ತೀರದು. ಮಳೆ ಬಿಸಿಲು ಎನ್ನದೆ ಬಸ್ ಸಲುವಾಗಿ ತಾಸು ಗಟ್ಟಲೆ ನಿಲ್ಲುವ ದುಸ್ಥಿತಿ ಎದುರಾಗಿದೆ. ಸಂಬಂಧಿಸಿದ  ಅಧಿಕಾರಿಗಲಾದವರು ಜನರ ಬವಣೆ ಅರಿತು ನಿಲ್ದಾಣದಲ್ಲಿ ಬಸ್ ಬಿಡುವ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ರಾಯರೆಡ್ಡಿ ಅವರು ಆಗ್ರಹಿಸಿದ್ದಾರೆ.