ತಳಕಲ್ ಜಹಿರಾ ಬೇಗಂ ಟೀಚರ್ ಈಗ ಗ್ರಾ ಪಂ.ಅಧ್ಯಕ್ಷೆ ! 


ರುದ್ರಪ್ಪ ಭಂಡಾರಿ.
ಕುಕನೂರು, ಜು.19: ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅತಿಥಿ ಶಿಕ್ಷಕಿ ಯಾಗಿ ಪಾಠ ಹೇಳಿ ಕೊಡುತ್ತಿದ್ದ ಶಿಕ್ಷಕಿ ಯೊಬ್ಬರು ಇದೀಗ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಚುನಾಯಿತ ರಾಗಿದ್ದಾರೆ.   ಹೌದು !  ತಾಲೂಕಿನ ತಳಕಲ್ ಗ್ರಾ.ಪಂ. ಸದಸ್ಯೆ ಯಾಗಿದ್ದ ಜಹಿರಬೇಗಂ  ಗಂಡ ಜಾಕಿರ್ ಹುಸೇನ್ ಕೊಪ್ಪಳ ಅವರು  ಮಂಗಳವಾರ ತಳಕಲ್ ಗ್ರಾ.ಪಂ. ಎರಡನೇ ಅವಧಿಯ ಅಧ್ಯಕ್ಷ -ಉಪಾಧ್ಯಕ್ಷರ  ಚುನಾವಣೆಯಲ್ಲಿ  ಒಟ್ಟು  ೧೯  ಮತಗಳಲ್ಲಿ ೧೩ ಮತಗಳನ್ನು ವಿಜಯ ಮಾಲೆ ಧರಿಸಿದ್ದಾರೆ.           
ಪಿಯುಸಿ ಡಿ.ಎಡ್. ಪದವಿ ಪಡೆದಿರುವ ಇವರು ಅತಿಥಿ ಶಿಕ್ಷಕಿಯಾಗಿ ವಿವಿಧ ಶಾಲೆಗಳಲ್ಲಿ ಪಾಠ ಗಳನ್ನೂ ಹೇಳುವ ಜೊತೆಗೆ ನೂರಾರು ಮಕ್ಕಳ ಅಚ್ಚಮೆಚ್ಚಿನ ಗುರುಗಳಾಗಿ ಗಮನ ಸೆಳೆದಿದ್ದಾರೆ, ಓದುವ ಹಾಗೂ ಪಾಠ ಹೇಳಿಕೊಡುವ ಜೊತೆಗೆ ಸಮಾಜ ಸೇವೆ ಯಲ್ಲಿಯೂ  ತಮ್ಮ ಕುಟುಂಬದ ಅಳಿಲು ಸೇವೆ ಇರಲೆಂದು ಇವರ ಪತಿ ಜಾಕಿರ್ ಹುಸೇನ್  ಕೊಪ್ಪಳ ಇವರ ಪ್ರೋತ್ಸಾಹ  ಊರಿನ , ವಾಡಿ ೯ನ ಹಿರಿಯರ ಬೆಂಬಲದಿಂದ ಕಳೆದ ೧೦ ವರುಷಗಳಿಂದ ರಾಜಕೀಯ ಚಟುವಟಿಕೆಯಲ್ಲಿ ತೊಡಗಿ ಜನ ಸಾಮಾನ್ಯರ ಮೂಲ ಸೌಕರ್ಯ ಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಗಳ ಮೂಲಕ ಸಾವ೯ಜನಿಕರ ಗಮನ ಸೆಳೆದಿದ್ದಾರೆ. ಕಳೆದ ಎರಡುವರಿ ವರುಷಗಳಿಂದ ವಾಡಿ೯ನಲ್ಲಿ ಕುಡಿಯುವ ನೀರು, ವಿದ್ಯುತ್, ಸಾವ ೯ಜನಿಕರ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿದ್ದಾರೆ.  ಎಲ್ಲ ಆಡಳಿತಾತ್ಮಕ ದೃಷ್ಟಿಯಿಂದ ಹಾಗೂ   ಅಧ್ಯಕ್ಷಗಿರಿ  ಎಂಬ ಕಬ್ಬಿಣದ ಕಡಲೆ ನಿಭಾಯಿಸುವ ಹೊಣೆ  ಯನ್ನು  ಕಾಂಗ್ರೆಸ್ ಹೈಕಮಾಂಡ್ ಜಹೀರ ಬೇಗಂ ಮೇಲೆ ಜವಾಬ್ದಾರಿ ಕೊಟ್ಟಿದ್ದಾರೆ. ಅದು ಅಲ್ಲದೆ ಹಿಂದಿನ ಬಾರಿ ತಳಕಲ್ ತಾ.ಪಂ. ಅಭ್ಯಥಿ೯  ಕೆಲವೇ ಮತಗಳ ಅಂತರದಿಂದ ಪರಾಭವ ಗೊಂಡಿದ್ದರು.          ಸಾಧಿಸುವ ಛಲ ಮೈಗೂಡಿಸಿ ಕೊಂಡಿರುವ ಪರಿಣಾಮ ಇಂದು  ತಳಕಲ್  ಎಂಬ ಪುಟ್ಟ ಗ್ರಾಮವು ಅತ್ಯುನ್ನತ   ದಜೆ೯ಯ ಎಂಜಿನೀಯರ್ ಶಿಕ್ಷಣ, ರೈಲು ಜಂಕ್ಷನ್, ಕೌಶಲ್ಯ ಅಭಿವೃದ್ಧಿ ಕೇಂದ್ರ, ಒಕ್ಕಲುತನ  ಹಾಗೂ ರಾಜಕೀಯ ಸಾಧನೆ  ಮಾಡಿದ ರಾಯರೆಡ್ಡಿ ಅವರ.        ಸ್ವಗ್ರಾಮ ಮನೆತನ ಸೇರಿದಂತೆ ರಾಷ್ಟ್ರೀಯ ಮಟ್ಟದ  ಗಮನ ಸೆಳೆದ ತಳಕಲ್   ಗ್ರಾಮದ ಪ್ರಥಮ ಪ್ರಜೆ ಯಾಗಿದ್ದು ವಿದ್ಯಾವಂತ ಮಹಿಳೆಗೆ ನೀಡಿದ ಸಂದ ಗೌರವ ಎಂದು ಪ್ರಜ್ಞಾವಂತರ ಅಭಿಪ್ರಾಯ. ತೊಟ್ಟಿಲು ತೂಗುವ ಕೈ  ಇದೀಗ ಗ್ರಾಮ ಪಂಚಾಯತ್  ಅಭಿವೃದ್ಧಿ ಯತ್ತ ಗಮನ ನೀಡುವಂತಿದೆ.  ಅಧ್ಯಕ್ಷ ಹುದ್ದೆಗೆ ತೀವ್ರ ಪೈಪೋಟಿ ಯಲ್ಲಿ ಶಾಸಕ ಬಸವರಾಜ್ ರಾಯರೆಡ್ಡಿ ಅವರ ಮಾಗ೯ದಶ೯ನದಲ್ಲಿ ಮುಖಂಡರಾದ ಶಿವಣ್ಣ ರಾಯರೆಡ್ಡಿ, ತಿಮ್ಮಣ್ಣ ಚವಡಿ ಲಿಂಬನಗೌದ್ರ, ಮಲ್ಲಿಕಾಜು೯ನ ಗೌಡ್ರ , ಕೊರಗಲ್ ಮಠ ಮೊದಲಾದವು ಒಮ್ಮತ ಆಯ್ಕೆ ಜಹೀರ ಬೇಗಂ ಟೀಚರ್ ಗೆಲುವಿಗೆ ಶ್ರಿ ರಕ್ಷೆ ಯಾಗಿದೇ.  ಓದು ಒಕ್ಕಾಲು ಬುದ್ದಿ ಮುಕ್ಕಾಲು ಎನ್ನುವಂತೆ ಲವಲವಿಕೆಯಿಂದ ಸದಾ ಚಟುವಟಿಕೆ ಯಲ್ಲಿದ್ದರೆ  ಅವಕಾಶ ಗಳು ಒಂದಲ್ಲ ಒಂದು ದಿನ ಒದಗಿ ಬರುವುದು ಸಹಜ ಎನ್ನುವುದು ಸಾಬೀತಾಗಿದೆ.