ತಳಕಲ್ ಗ್ರಾಪಂ ಅಧ್ಯಕ್ಷರಾಗಿ ಜಹೀರಾ ಬೇಗಂ ಉಪಾಧ್ಯಕ್ಷೆ ಜಿಂದಾಬಿ ಗೆಲುವು


ಸಂಜೆವಾಣಿ ವಾರ್ತೆ
ಕುಕನೂರು, ಜು.19: ತಾಲೂಕಿನ ತಳಕಲ್ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಮಂಗಳವಾರ ದಿವಸ ಮತದಾನದ ಮೂಲಕ ಯಶಸ್ವಿಯಾಗಿ ಜರುಗಿತು.
 ತಳಕಲ್ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ಸದಸ್ಯರ 19 ಮತಗಳ ಪೈಕಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ಜಹೀರಾಬೇಗಂ ಜಾಕಿರ್ ಹುಸೇನ್ ಕೊಪ್ಪಳ. ಉಪಾಧ್ಯಕ್ಷ ಸ್ಥಾನಕ್ಕೆ ಜಿಂದಾಬಿ ಫಕ್ರುದ್ದೀನ್ ಸಾಬ್ ಬಡಗುಡಿ, ಸ್ಪರ್ಧಿಸಿ 13 ಮತಗಳು ಬೀಳುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಬೀಳುವುದರ ಮೂಲಕ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ಕೇವಲ ಐದು ಮತಗಳು ಬಿದ್ದು ಒಂದು ಗೈರಾಗಿ ದಾರಿ ಅಂತರದಿಂದ ಗೆಲುವು ಸಾಧಿಸುವುದರ ಮೂಲಕ ಮೂಲಕ ಪಂಚಾಯತಿಯ ಅಧ್ಯಕ್ಷರಾಗಿ. ಜಹೀರಾ  ಉಪಾಧ್ಯಕ್ಷೆಯಾಗಿ ಜಿಂದಾಬಿ ಫಕ್ರುದ್ದೀನ್ ಸಾಬ್ ಬಡಗುಡಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಅಭಿಯಂತರರು ಚುನಾವಣಾ ಕಾಯ೯ ನೀವ೯ಹಿಸಿದರು.
ಚುನಾವಣೆ ಪ್ರಕ್ರಿಯೆ ಮುಗಿದನಂತರ ನಂತರ ವಿಜಯೋತ್ಸವದಲ್ಲಿ ಮುಖಂಡರಾದ ತಿಮ್ಮಣ್ಣ ಚೌಡಿ, ಶಿವಣ್ಣರಾಯರಡ್ಡಿ, ಜಂಬಣ್ಣ ಬೆಣಕಲ್, ಮಲ್ಲಿಕಾರ್ಜುನ್ ಗೌಡ, ಜಾಕಿರ್ ಹುಸೇನ್ ಕೊಪ್ಪಳ, ಲೀoಬನಗೌಡ ಪಾಟೀಲ್,   ಗ್ರಾಮಸ್ಥರು ಇತರರು ಉಪಸ್ಥಿತರಿದ್ದರು..