ತಲ್ವಾರ್ ನಿಂದ ಕೇಕ್ ಕತ್ತರಿಸಿ ಬರ್ತಡೇ ಆಚರಿಸಿದ ಯುವಕ

ವಿಜಯಪುರ,ಜ.16:ತಲ್ವಾರ್ ನಿಂದ ಬರ್ತಡೇ ಕೇಕ್ ಕತ್ತರಿಸಿ ಯುವಕನೊಬ್ಬ ತನ್ನ ಹುಟ್ಟು ಹಬ್ಬ ಆಚರಿಸಿಕೊಂಡ ಘಟನೆ ನಡೆದಿದೆ.
ವಿಜಯಪುರ ನಗರದ ಪೇಟಿ ಬಾವಡಿ ಬಡಾವಣೆ ನಿವಾಸಿ
ಅಮನ್ ಲೋಣಿ ತಲ್ವಾರ್ ನಿಂದ ಕೇಕ್ ಕತ್ತರಿಸಿದ ಯುವಕ
ಅಮನ್ ಲೋಣಿಗೆ ರೌಡಿ ಶೀಟರ್ ಮಹ್ಮದ್ ಸಾಜೀದ್ ಇನಾಮದಾರ್ ಸಾಥ್ ನೀಡಿದ್ದಾರೆ.
ತಲ್ವಾರ್ ನಿಂದ ಕೇಕ್ ಕತ್ತರಿಸಿದ್ದು ಚರ್ಚೆಗೆ ಗ್ರಾಸ
ತಲ್ವಾರ್ ನಿಂದ ಕೇಕ್ ಕತ್ತರಿಸುವುದು ಯಾವ ಸಂಪ್ರದಾಯ ಎಂದು ಪ್ರಜ್ಞಾವಂತರು ಆಡಿಕೊಳ್ಳುವಂತಾಗಿದೆ.
ಅಮನ್ ಲೋಣಿ ಹಾಗೂ ರೌಡಿ ಶೀಟರ್ ನನ್ನು ಗೋಳಗುಮ್ಮಟ ಪೆÇಲೀಸ್ ಠಾಣೆಗೆ ಕರೆಸಿ ಪೆÇಲೀಸರು ವಿಚಾರಣೆ ನಡೆಸಿದ್ದಾರೆ.
ಗೋಲಗುಂಬಜ್ ಪೆÇಲೀಸರು
ಅಮನ್ ಲೋಣಿ ಹಾಗೂ ರೌಡಿ ಶೀಟರ್ ಬಳಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳುಹಿಸಿದ್ದಾರೆ.
ಗೋಲಗುಂಬಜ್ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.