ತಲೆ ಮೇಲೆ ಹರಿದ ಬಸ್: ಬಾಲಕ ಸಾವು


 ಸಂಜೆ ವಾಣಿ ವಾರ್ತೆ
ಕೊಟ್ಟೂರು: ತಾಲೂಕಿನ ಹರಾಳು ಕ್ರಾಸ್ ಬಳಿ ಬಾಲಕ ಆಫಾನ್(12) ತಲೆಯ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದ ಪರಿಣಾಮವಾಗಿ ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಘಟನೆ ವಿವರ:
ಕೂಡ್ಲಿಗಿಯ ಅಸ್ಲಾಂ ಭಾಷಾ ತನ್ನ ಬೈಕ್ ನಲ್ಲಿ  ಮಕ್ಕಳಾದ ಮಹಮ್ಮದ್ ಆಫ್ಫಾನ್ ಮತ್ತು ಮಹಮದ್ ಫಾರನ್ ಇವರಿಬ್ಬರನ್ನು ಕೂರಿಸಿಕೊಂಡು ಹರಪ್ಪನಹಳ್ಳಿಯಿಂದ ಕೊಟ್ಟೂರು ಕಡೆಗೆ ಬರುತ್ತಿರುವಾಗ ಮುಂದೆ ಹೋಗುತ್ತಿದ್ದ ಬಸ್ಸನ್ನು ಓವರ್ ಟೆಕ್ ಮಾಡಲು ಹೋಗಿ ಕೊಟ್ಟೂರು ಕಡೆಯಿಂದ ಬರುತ್ತಿದ್ದ ಹೀರೋ ಬೈಕಿಗೆ ಡಿಕ್ಕಿ ಪಡಿಸಿದಾಗ ಬೈಕಿನಲ್ಲಿದ್ದ ಅಫಾನ್  ರಸ್ತೆಯ ಎಡಗಡೆ ಬಿದ್ದಿದ್ದು, ಆಗ ತನ್ನ ಪಕ್ಕದಲ್ಲಿ ಬೈಕ್ ಬರುತ್ತಿರುವುದಾಗಿ ತಿಳಿದ ಬಸ್ಸಿನ ಚಾಲಕ  ತನ್ನ ಬಸ್ಸನ್ನು ಅತಿ ವೇಗ ಮತ್ತು ಅಜಾರಕತೆಯಿಂದ ನಡೆಸಿ  ಆಫಾನ್ ತಲೆಯ ಮೇಲೆ ಬಸ್ಸನ್ನು ಹತ್ತಿಸಿಕೊಂಡು ಹೋದ ಪರಿಣಾಮವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಈ ಘಟನೆಗೆ ಕಾರಣರಾದ ಇಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೃತನ ತಾಯಿ ನೀಡಿದ ದೂರಿನ ಅನ್ವಯ ಈ ಪ್ರಕರಣ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.