ತಲೆ ಮೇಲೆ ಕಲ್ಲು ಎತ್ತಿಹಾಕಿ ಸಾಮಾಜಿಕ ಕಾರ್ಯಕರ್ತೆಯ ಕೊಲೆ

ಕಲಬುರಗಿ,ಮಾ 23: ಬೈಕ್ ಮೇಲೆ ತೆರಳುತ್ತಿದ್ದಾಗ ಕಾರಿನಿಂದ ಡಿಕ್ಕಿ ಹೊಡೆದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ವಕೀಲೆ ಮತ್ತು ಸಾಮಾಜಿಕ ಕಾರ್ಯಕರ್ತೆಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಹಾಗರಗಾ ಕ್ರಾಸ್ ಹತ್ತಿರ ಹಾಡುಹಗಲೇ ನಡೆದಿದೆ.
ನಗರದ ಜಂಜಂ ಕಾಲೋನಿ ನಿವಾಸಿ ಮಜಬ್ ಸುಲ್ತಾನ್ (35) ಹತ್ಯೆಯಾದ ಮಹಿಳೆ.
ಆಸ್ತಿ ವಿಚಾರವಾಗಿ ಅಜೀಂ ಗೌಂಡಿ,ವಸೀಂ ಗೌಂಡಿ,ನಯೀಮ್ ಮತ್ತು ನದೀಮ್ ಎಂಬುವವರು ಸೇರಿ ಹತ್ಯೆ ಮಾಡಿದ್ದಾರೆ ಎಂದು ಮೃತ ಮಹಿಳೆಯ ಪತಿ ಸದ್ದಾಂ ದೂರು ಸಲ್ಲಿಸಿದ್ದಾರೆ.
ಬೇರೆ ಕಡೆ ಮನೆ ಸ್ಥಳಾಂತರಿಸಿದ್ದರಿಂದ ಮನೆಯ ಸಾಮಗ್ರಿಗಳನ್ನು ತುಂಬಿಕೊಂಡ ಹೊರಟ ಟಂಟಂ ಹಿಂದೆ ದ್ವಿಚಕ್ರವಾಹನದಲ್ಲಿ ಈ ಮಹಿಳೆ ಹೊರಟಿದ್ದಾಗ ದುರ್ಘಟನೆ ನಡೆದಿದೆ.
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಚೇತನ್ ಆರ್,ಉಪ ಆಯುಕ್ತ ಅಡೂರು ಶ್ರೀನಿವಾಸಲು ಭೇಟಿ ನೀಡಿದರು.
ಶ್ವಾನದಳ,ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲಿಸಿದರು .ಗುಲಬರ್ಗ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.