ತಲೆ ಮರೆಸಿಕೊಂಡಿದ್ದ ರೌಡಿಶೀಟರ್ ಮಾರ್ಕೆಟ್ ಸತ್ಯಾ ಬಂಧನ

ಕಲಬುರಗಿ ನ 14 ಹಲವು ಕೇಸ್‍ಗಳಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದಕುಖ್ಯಾತ ರೌಡಿ ಶೀಟರ್ ಮಾರ್ಕೆಟ್ ಸತ್ಯಾ ಅಲಿಯಾಸ್ ಸತೀಶರಡ್ಡಿಯನ್ನು ಪೆÇಲೀಸರು ಬಂಧಿಸಿದ್ದಾರೆ.
ಕಲಬುರಗಿ ನಗರದಲ್ಲಿ ಈಚೆಗೆ ನಡೆದ ಎರಡು ಕಡೆ ದರೋಡೆಗೆ ಹೊಂಚು ಹಾಕಿ ಯತ್ನಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾರ್ಕೆಟ್ ಸತ್ಯಾನೇ ಅದರ ರೂವಾರಿಯಾಗಿದ್ದ. ಅಲ್ಲದೆ ಕೋಕಾ ಕಾಯ್ದೆಯಡಿ ಬಂಧಿತನಾಗಿ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡ ಬಳಿ ಮರಳಿ ನ್ಯಾಯಾಲಯಕ್ಕೆ ಹಾಜರಾಗದೆ ಇರುವುದರಿಂದ ವಾರೆಂಟ್ ಹೊರಡಿಸಲಾಗಿತ್ತು.
ಈ ಎರಡು ಕೇಸ್‍ಗಳ ಹಿನ್ನೆಲೆಯಲ್ಲಿ ನೆರೆಯ ತೆಲಂಗಾಣದ ಹೈದರಾಬಾದನ ಸೈದಾಬಾದನಲ್ಲಿ ಕಲಬುರಗಿ ಪೆÇಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ತೆಗೆದುಕೊಂಡು ನಗರಕ್ಕೆ ಕರೆ ತಂದು ವಿಚಾರಣೆ ನಡೆಸಿದ್ದಾರೆ. ಆಗ ಗ್ರಾಮೀಣ ಮತ್ತು ವಿಶ್ವವಿದ್ಯಾಲಯ ಠಾಣೆಯ ವ್ಯಾಪ್ತಿಯಲ್ಲಿ ವರದಿಯಾಗಿರುವಂತೆ ದರೋಡೆಗೆ ಯತ್ನಿಸಿದ ರಾಹುಲ್ ಹೊನ್ನಳ್ಳಿ ಗ್ಯಾಂಗಿನವರಿಗೆ ಸಹಕಾರ ನೀಡಿದ್ದಾಗಿ ಹೇಳಿಕೊಂಡಿದ್ದಾನೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಪೆÇಲೀಸ್ ಕಮೀಷನರ್ ಎನ್.ಸತೀಶಕುಮಾರ, ಡಿಸಿಪಿ ಕಿಶೋರಬಾಬು, ಎಸಿಪಿ ಗಿರೀಶ ಎಸ್.ಬಿ. ಮಾರ್ಗದರ್ಶನದಲ್ಲಿ ಚೌಕ್ ಇನ್‍ಸ್ಪೆಕ್ಟರ್ ಎಸ್.ಆರ್.ನಾಯಕ, ಸಿಬ್ಬಂದಿ ರಾಜಕುಮಾರ ಚೌಧರಿ ಹಾಗೂ ತೌಸೀಪ್ ಹುಸೇನ್ ಸೇರಿಕೊಂಡು ಹೈದರಾಬಾದನ ಸೈದಾಬಾದನಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಕೋಕಾ ಕಾಯ್ದೆಯಡಿ ಎನ್‍ಬಿಡಬ್ಲೂ ಆಗಿದ್ದ. ಈಚೆಗೆ ರಾಬರಿ ಮಾಡಿಸಿದ್ದ ಪ್ರಕರಣದಲ್ಲಿ ಈತ ಪ್ರಾತ ಪ್ರಮುಖವಾಗಿದೆ. ಅಲ್ಲದೆ ಈ ಮುಂಚೆ ಹಲವಾರು ಕಡೆಗಳಲ್ಲಿ ನಡೆದ ದರೋಡೆ, ಕೊಲೆಗೆ ಯತ್ನ, ಸುಲಿಗೆ, ಅಕ್ರಮ ಶಸ್ತ್ರಾಸ್ತ್ರ ಮಾರಾಟ ಇನ್ನಿತರ ಪ್ರಕರಣಗಳಲ್ಲಿ ಮಾರ್ಕೆಟ್ ಸತ್ಯಾ ಶಾಮೀಲಾಗಿದ್ದರಿಂದ ಆತನ ವಿರುದ್ದ ಪ್ರಕರಣಗಳು ದಾಖಲಾಗಿದ್ದವು. ಈ ಘಟನೆ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಾರ್ಕೇಟ್ ಸತ್ಯಾನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ