ತಲೆಹೊಟ್ಟಿಗೆ ಸರಳ ಸಲಹೆ

ತಲೆಹೊಟ್ಟು ಬಹುತೇಕರನ್ನು ಕಾಡುವ ಸಮಸ್ಯೆ. ಇದನ್ನು ನಿವಾರಿಸಿಕೊಳ್ಳುವುದಕ್ಕಾಗಿ ಯಾವುದ್ಯಾವುದೋ ರಾಸಾಯನಿಕ ಶ್ಯಾಂಪೂ ಗಳನ್ನು ಬಳಸಿ ಸೋತು ಹೋಗುತ್ತಾರೆ.

ನಿಂಬೆ ಮತ್ತು ಮೊಸರನ್ನು ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಸಂಪೂರ್ಣವಾಗಿ ಹಚ್ಚಿ ೧೫ -೨೦ ನಿಮಿಷ ಬಿಟ್ಟು ಉಗುರುಬೆಚ್ಚಗಿನ ನೀರಿನೋದಿಗೆ ತೊಳೆಯಬೇಕು. ವಾರಕ್ಕೊಮ್ಮೆ ಈ ರೀತಿ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.

ಮೊಟ್ಟೆಯ ಲೋಳೆಯನ್ನು ತಲೆಗೆ ಹಚ್ಚಿ ತೊಳೆಯುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.

ಶಾಂಪೂ ಬದಲಿಗೆ ಅಡುಗೆ ಸೋಡವನ್ನು ಉಪಯೋಗಿಸಿ. ತಲೆ ಸ್ನಾನ ಮಾಡುವ ಮೊದಲು ಚಿಟಕೆ ಸೋಡಾವನ್ನು ನೀರಿನೊಂದಿಗೆ ಬೆರೆಸಿ ತಲೆಸ್ನಾನ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.

ಮೆಂತೆ ಕಾಳನ್ನು ನೆನೆಸಿ ಅದನ್ನು ರುಬ್ಬಿ ಪೇಸ್ಟ್ ಮಾಡಿಕೊಂಡು ತಲೆಗೆ ಹಚ್ಚಿ ೩೦ ನಿಮಿಷ ಬಿಟ್ಟು ತಲೆಸ್ನಾನ ಮಾಡಿದರೆ ತಲೆ ಹೊಟ್ಟು ನಿವಾರಣೆಯಾಗುತ್ತದೆ.