ತಲೆಮಾರಿ ಗ್ರಾಮ ಕೊರೊನಾ ಹಾಟ್ ಸ್ಪಾಟ್‌

ರಾಯಚೂರು, ಆ. ೨- ರಾಯಚೂರು ತಾಲೂಕಿನ ತಲೆಮಾರಿ ಗ್ರಾಮ ಈಗ ಜಿಲ್ಲೆಯಲ್ಲಿ ಕೊರೋನಾ ಹಾಟ್ ಸ್ಪಾಟ್ ಆಗಿ ಪರಿಣಮಿಸಿದೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.ಕೊರೋನಾ ಭಯದಿಂದ ಯಾರು ಮನೆ ಬಿಟ್ಟು ಹೊರ ಬರುವ ಸಾಹಸ ಮಾಡುತ್ತಿಲ್ಲ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಒಂದೇ ದಿನ ೩೮ ಮಂದಿಗೆ ಪಾಸಿಟಿವ್ ಬಂದಿತ್ತು, ನಿನ್ನೆ ಮತ್ತೆ ಇಬ್ಬರಿಗೆ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ಗ್ರಾಮದ ಒಟ್ಟು ಸೋಂಕಿತರ ಸಂಖ್ಯೆ ೭೨ಕ್ಕೆ ಏರಿದೆ.
ಈ ಮಧ್ಯೆ ಜಿಲ್ಲಾಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮವನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಿದ್ದಾರೆ
ರಾಯಚೂರು ತಾಲೂಕಿನ ತಲಮಾರಿ ಗ್ರಾಮದಲ್ಲಿ ಅಂದಾಜು ೫ ಸಾವಿರ ಜನಸಂಖ್ಯೆ ಇದೆ.೧೦೮೦ ಮನೆ ಗಳಿವೆ. ಚಿಕ್ಕ ಗ್ರಾಮದಲ್ಲಿ ಕೊರೋನಾ ಸೋಂಕು ಏರಿಕೆ ಯಿಂದ ಇಡೀ ಗ್ರಾಮದಲ್ಲಿ ಭಯದ ಭೀತಿ ಎದುರಾಗಿದೆ
ಗ್ರಾಮದ ೭೨ ಜನರಲ್ಲಿ ಸೋಂಕು ಕಾಣಿಸಿಕೊಂಡಿರುವುದರಿಂದ ಉಳಿದವರು ಮನೆಯಿಂದ ಹೊರಗಡೆ ಬರುತ್ತಿಲ್ಲ. ಶ್ರಾವಣ ಮಾಸದ ಹಬ್ಬಗಳನ್ನು ಆಚರಿಸುತ್ತಿಲ್ಲ. ನಾಗರ ಪಂಚಮಿಯನ್ನ ಮನೆಯಲ್ಲೇ ಆಚರಿಸಿಕೊಂಡಿರುವ ಜನ ವರಮಹಾಲಕ್ಷ್ಮಿ ಪೂಜೆಯನ್ನೂ ಮನೆಯಲ್ಲೇ ಮಾಡಿದ್ದಾರೆ. ಇಡೀ ಗ್ರಾಮದಲ್ಲಿ ಜನತೆ ಯಾವಾಗ ಕೊರೋನಾ ನಮಗೂ ಅಂಟುತ್ತದೆ ಎಂಬ ಆತಂಕ ಜನರಲ್ಲಿದೆ. ಇದಕ್ಕೆ ಕಾರಣ ಇತ್ತೀಚೆಗೆ ಗ್ರಾಮದಲ್ಲಿ ನಡೆದ ಮದುವೆಗಳಲ್ಲಿ ಹೆಚ್ಚು ಜನ ಸೇರಿದ್ದೇ ಈ ಅನಾಹುತಕ್ಕೆ ಕಾರಣವಾಗಿದೆ.
ಮದುವೆಯಲ್ಲಿ ಆಂಧ್ರಪ್ರದೇಶ, ತೆಲಂಗಾಣದ ಜನ ಎಗ್ಗಿಲ್ಲದೇ ಸೇರಿದ್ದರಿಂದ ಇಡೀ ಊರಿನ ತುಂಬಾ ಕೊರೋನಾ ಹಬ್ಬಿದೆ. ಗ್ರಾಮದಲ್ಲಿ ನಡೆದ ಐದು ಮದುವೆಗಳಲ್ಲಿ ಕೆಲ ಮದುವೆಗಳಿಗೆ ಅನುಮತಿಯನ್ನೇ ಪಡೆದಿಲ್ಲ. ಅಲ್ಲದೇ ನೂರಾರು ಜನರನ್ನ ಮದುವೆಗಳಿಗೆ ಸೇರಿಸಲಾಗಿದೆ.
ಅಗತ್ಯ ವಸ್ತುಗಳಿಗಾಗಿ ಸಿಡಿಪಿಒ ನೇತ್ರತ್ವದಲ್ಲಿ ತಂಡ ರಚಿಸಿ ಗ್ರಾಮಸ್ಥರಿಗೆ ಅಗತ್ಯ ವಸ್ತುಗಳನ್ನು ಮನೆ ಮನೆಗೆ ನೀಡಲು ಸೂಚಿಸಿದ್ದಾರೆ.
ಈ ಗ್ರಾಮಸ್ಥರು ರಾಯಚೂರಿಗೆ ಬರುವುದು, ರಾಯಚೂರು ಹಾಗು ಸುತ್ತಲಿನ ಗ್ರಾಮಸ್ಥರು ತಿರುಗಾಡಿದ್ದರಿಂದ ಸೋಂಕು ಇನ್ನಷ್ಟು ಹರಡುವ ಭೀತಿ ಇದೆ.
ಇಡೀ ಗ್ರಾಮದ ಜನರ ಗಂಟಲ ದ್ರವ ಪರೀಕ್ಷೆ ಮಾಡಬೇಕಾಗಿದೆ, ಪುಟ್ಟ ಗ್ರಾಮದಲ್ಲಿ ಮದುವೆಯಿಂದಾಗಿ ಈಗ ಸೀಲ್ ಡೌನ್ ಆಗಿದೆ. ಸೋಂಕಿತರನ್ನು ರಾಯಚೂರಿನ ಕೋವಿಡ್ ಕೇರ್ ಸೆಂಟರ್ ಗೆ ರವಾನಿಸಲಾಗಿದೆ,
ನಿನ್ನೆ ರಾಯಚೂರು ಜಿಲ್ಲೆಯಲ್ಲಿ ಒಟ್ಟು ೧೦೯ ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ೨೩೮೧ಕ್ಕೆ ಏರಿಕೆಯಾಗಿದೆ, ನಿನ್ನೆ ಒಂದೇ ದಿನ ೬೭ ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಈಗ ಜಿಲ್ಲೆಯಲ್ಲಿ ೮೮೫ ಸಕ್ರಿಯ ಪ್ರಕರಣಗಳಿವೆ. ಕೋವಿಡ್ ಆಸ್ಪತ್ರೆಯಲ್ಲಿ ೧೦೯ ಜನರಿದ್ದರೆ, ಕೋವಿಡ್ ಕೇರ್ ಸೆಂಟರ್ ನಲ್ಲಿ ೭೭೮ ಜನರಿದ್ದಾರೆ. ಈಗ ಜಿಲ್ಲೆಯಲ್ಲಿ ಕೊರೋನಾ ಹಾಟ್ ಸ್ಪಾಟ್ ಆಗಿ ಪರಿಣಮಿಸಿದೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.ಕೊರೋನಾ ಭಯದಿಂದ ಯಾರು ಮನೆ ಬಿಟ್ಟು ಹೊರ ಬರುವ ಸಾಹಸ ಮಾಡುತ್ತಿಲ್ಲ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಒಂದೇ ದಿನ ೩೮ ಮಂದಿಗೆ ಪಾಸಿಟಿವ್? ಬಂದಿತ್ತು, ನಿನ್ನೆ ಮತ್ತೆ ಇಬ್ಬರಿಗೆ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ಗ್ರಾಮದ ಒಟ್ಟು ಸೋಂಕಿತರ ಸಂಖ್ಯೆ ೭೨ಕ್ಕೆ ಏರಿದೆ.
ಈ ಮಧ್ಯೆ ಜಿಲ್ಲಾಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮವನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಿದ್ದಾರೆ
ರಾಯಚೂರು ತಾಲೂಕಿನ ತಲಮಾರಿ ಗ್ರಾಮದಲ್ಲಿ ಅಂದಾಜು ೫ ಸಾವಿರ ಜನಸಂಖ್ಯೆ ಇದೆ.೧೦೮೦ ಮನೆ ಗಳಿವೆ. ಚಿಕ್ಕ ಗ್ರಾಮದಲ್ಲಿ ಕೊರೋನಾ ಸೋಂಕು ಏರಿಕೆ ಯಿಂದ ಇಡೀ ಗ್ರಾಮದಲ್ಲಿ ಭಯದ ಭೀತಿ ಎದುರಾಗಿದೆ
ಗ್ರಾಮದ ೭೨ ಜನರಲ್ಲಿ ಸೋಂಕು ಕಾಣಿಸಿಕೊಂಡಿರುವುದರಿಂದ ಉಳಿದವರು ಮನೆಯಿಂದ ಹೊರಗಡೆ ಬರುತ್ತಿಲ್ಲ. ಶ್ರಾವಣ ಮಾಸದ ಹಬ್ಬಗಳನ್ನು ಆಚರಿಸುತ್ತಿಲ್ಲ. ನಾಗರ ಪಂಚಮಿಯನ್ನ ಮನೆಯಲ್ಲೇ ಆಚರಿಸಿಕೊಂಡಿರುವ ಜನ ವರಮಹಾಲಕ್ಷ್ಮಿ ಪೂಜೆಯನ್ನೂ ಮನೆಯಲ್ಲೇ ಮಾಡಿದ್ದಾರೆ. ಇಡೀ ಗ್ರಾಮದಲ್ಲಿ ಜನತೆ ಯಾವಾಗ ಕೊರೋನಾ ನಮಗೂ ಅಂಟುತ್ತದೆ ಎಂಬ ಆತಂಕ ಜನರಲ್ಲಿದೆ. ಇದಕ್ಕೆ ಕಾರಣ ಇತ್ತೀಚೆಗೆ ಗ್ರಾಮದಲ್ಲಿ ನಡೆದ ಮದುವೆಗಳಲ್ಲಿ ಹೆಚ್ಚು ಜನ ಸೇರಿದ್ದೇ ಈ ಅನಾಹುತಕ್ಕೆ ಕಾರಣವಾಗಿದೆ.
ಮದುವೆಯಲ್ಲಿ ಆಂಧ್ರಪ್ರದೇಶ, ತೆಲಂಗಾಣದ ಜನ ಎಗ್ಗಿಲ್ಲದೇ ಸೇರಿದ್ದರಿಂದ ಇಡೀ ಊರಿನ ತುಂಬಾ ಕೊರೋನಾ ಹಬ್ಬಿದೆ. ಗ್ರಾಮದಲ್ಲಿ ನಡೆದ ಐದು ಮದುವೆಗಳಲ್ಲಿ ಕೆಲ ಮದುವೆಗಳಿಗೆ ಅನುಮತಿಯನ್ನೇ ಪಡೆದಿಲ್ಲ. ಅಲ್ಲದೇ ನೂರಾರು ಜನರನ್ನ ಮದುವೆಗಳಿಗೆ ಸೇರಿಸಲಾಗಿದೆ.
ಅಗತ್ಯ ವಸ್ತುಗಳಿಗಾಗಿ ಸಿಡಿಪಿಒ ನೇತ್ರತ್ವದಲ್ಲಿ ತಂಡ ರಚಿಸಿ ಗ್ರಾಮಸ್ಥರಿಗೆ ಅಗತ್ಯ ವಸ್ತುಗಳನ್ನು ಮನೆ ಮನೆಗೆ ನೀಡಲು ಸೂಚಿಸಿದ್ದಾರೆ.
ಈ ಗ್ರಾಮಸ್ಥರು ರಾಯಚೂರಿಗೆ ಬರುವುದು, ರಾಯಚೂರು ಹಾಗು ಸುತ್ತಲಿನ ಗ್ರಾಮಸ್ಥರು ತಿರುಗಾಡಿದ್ದರಿಂದ ಸೋಂಕು ಇನ್ನಷ್ಟು ಹರಡುವ ಭೀತಿ ಇದೆ.
ಇಡೀ ಗ್ರಾಮದ ಜನರ ಗಂಟಲ ದ್ರವ ಪರೀಕ್ಷೆ ಮಾಡಬೇಕಾಗಿದೆ, ಪುಟ್ಟ ಗ್ರಾಮದಲ್ಲಿ ಮದುವೆಯಿಂದಾಗಿ ಈಗ ಸೀಲ್ ಡೌನ್ ಆಗಿದೆ. ಸೋಂಕಿತರನ್ನು ರಾಯಚೂರಿನ ಕೋವಿಡ್ ಕೇರ್ ಸೆಂಟರ್‌ಗೆ ರವಾನಿಸಲಾಗಿದೆ,
ನಿನ್ನೆ ರಾಯಚೂರು ಜಿಲ್ಲೆಯಲ್ಲಿ ಒಟ್ಟು ೧೦೯ ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ೨೩೮೧ಕ್ಕೆ ಏರಿಕೆಯಾಗಿದೆ, ನಿನ್ನೆ ಒಂದೇ ದಿನ ೬೭ ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಈಗ ಜಿಲ್ಲೆಯಲ್ಲಿ ೮೮೫ ಸಕ್ರಿಯ ಪ್ರಕರಣಗಳಿವೆ. ಕೋವಿಡ್ ಆಸ್ಪತ್ರೆಯಲ್ಲಿ ೧೦೯ ಜನರಿದ್ದರೆ, ಕೋವಿಡ್ ಕೇರ್ ಸೆಂಟರ್ ನಲ್ಲಿ ೭೭೮ ಜನರಿದ್ದಾರೆ.