ತಲೆನೋವಿಗೆ ಮನೆ ಮದ್ದು

ತಲೆನೋವಿನ ನಿವಾರಣೆಗೆ ಮಾತ್ರೆಗಳಿಗಿಂತಲೂ ಹೆಚ್ಚಿನ ಶಕ್ತಿ ಉಳ್ಳ, ಯಾವುದೇ ಅಡ್ಡಪರಿಣಾಮಗಳನ್ನು ಉಂಟು ಮಾಡದ ಚಹಾ ಕುಡಿದು ತಲೆನೋವು ಶಮನ ಮಾಡಿಕೋಳ್ಳಬಹುದು
​ದಾಲ್ಚಿನ್ನಿ ಮತ್ತು ತುಳಸಿ ಚಹಾ
ದಾಲ್ಚಿನ್ನಿ ನೈಸರ್ಗಿಕ ನೋವು ನಿವಾರಕವಾಗಿ ಕಾರ್ಯ ನಿರ್ವಹಿಸುತ್ತದೆ. ತಲೆನೋವು ಬಂದಾಗ ಇದರ ಸೇವನೆ ವಿಶೇಷವಾಗಿ ಪರಿಣಾಮಕಾರಿಯಾಗಿರುತ್ತದೆ. ಅದೇ ರೀತಿ ತುಳಸಿಯಲ್ಲಿ ಉರಿಯೂತದ ಗುಣಗಳಿವೆ. ಚಹಾಕ್ಕೆ ತುಳಸಿಯನ್ನು ಸೇರಿಸುವುದರಿಂದ ಒತ್ತಡ ಮತ್ತು ಉದ್ವೇಗದಿಂದಾಗಿರುವ ತಲೆನೋವನ್ನು ಸ್ನಾಯು ಸಡಿಲಗೊಳಿಸುವ ಮೂಲಕ ನೋವನ್ನು ಹೋಗಲಾಡಿಸುವ ಕೆಲಸ ಮಾಡುತ್ತದೆ.
ಚಹಾ ಮಾಡುವ ವಿಧಾನ
ದಾಲ್ಚಿನ್ನಿ ಒಂದು ಸಣ್ಣ ಚೂರು, 3-4 ತುಳಸಿ ಎಲೆಗಳು, 1-2 ಪುದೀನಾ ಎಲೆಗಳು, 1.5 ಕಪ್ ನೀರು ತೆಗೆದುಕೊಳ್ಳಿ. ದಾಲ್ಚಿನ್ನಿ ಚೂರನ್ನು ಹಾಕಿ 10 ನಿಮಿಷಗಳ ಕಾಲ ನೀರನ್ನು ಕುದಿಸಿ. ನಂತರ ಒಂದು ಕಪ್’ನಲ್ಲಿ ತುಳಸಿ ಮತ್ತು ಪುದೀನಾ ಎಲೆಗಳನ್ನು ಹಾಕಿ. ನಂತರ ಇದಕ್ಕೆ ಕುದಿಸಿದ ದಾಲ್ಚಿನ್ನಿ ನೀರನ್ನು ಸುರಿಯಿರಿ. 2 ನಿಮಿಷಗಳ ಕಾಲ ಮುಚ್ಚಿಟ್ಟು, ಸೇವಿಸಿ.
​ಲವಂಗ ಮತ್ತು ಶುಂಠಿ ಚಹಾ
ಲವಂಗವು ನರ ಕೋಶಗಳ ಉರಿಯೂತವನ್ನು ಕಡಿಮೆ ಮಾಡುವುದರ ಮೂಲಕ ಮತ್ತು ರಕ್ತ ಪರಿಚಲನೆ ಸುಧಾರಿಸುವ ಮೂಲಕ ನೈಸರ್ಗಿಕವಾಗಿ ತಲೆನೋವು ಮತ್ತು ಒತ್ತಡವನ್ನು ಗುಣಪಡಿಸುತ್ತದೆ. ನೋವು ನಿಯಂತ್ರಣದ ವಿಷಯದಲ್ಲಿ ಇವು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಹಲ್ಲಿನ ನೋವು ನಿವಾರಣೆಗೆ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಮತ್ತೊಂದೆಡೆ ಶುಂಠಿ ವಾಕರಿಕೆ ನಿಯಂತ್ರಿಸುತ್ತದೆ ಮತ್ತು ತಲೆನೋವುಗಳಿಗೆ ಹಳೆಯ ಔಷಧಿಯಾಗಿ ಬಳಸಲಾಗುತ್ತದೆ.
ಚಹಾ ಮಾಡುವ ವಿಧಾನ
ಲವಂಗ – 2, ಶುಂಠಿ ಚೂರುಗಳು – 2, ಪುದೀನಾ- 3-4 ಎಲೆಗಳು, ನಿಂಬೆ ತುಂಡು – 1, ನೀರು – 1.5 ಕಪ್ ತೆಗೆದುಕೊಳ್ಳಿ. ಈ ಚಹಾವನ್ನು ತಯಾರಿಸಲು ಲವಂಗ ಮತ್ತು ಶುಂಠಿ ಚೂರುಗಳೊಂದಿಗೆ ನೀರನ್ನು 2-3 ನಿಮಿಷಗಳ ಕಾಲ ಕುದಿಸಿ. ನಂತರ ಇದನ್ನು 5 ನಿಮಿಷಗಳ ಕಾಲ ಬಿಡಿ. ಒಂದು ಕಪ್’ನಲ್ಲಿ ಪುದೀನಾ ಮತ್ತು ನಿಂಬೆ ತುಂಡನ್ನು ಹಾಕಿ. ಈಗ ಇದಕ್ಕೆ ಕುದಿಸಿದ ಮಿಶ್ರಣವನ್ನು ಸೇರಿಸಿ.
​ದಾಸವಾಳ
ದಾಸವಾಳದ ಚಹಾವು ಆಂಟಿ ಆಕ್ಸಿಡೆಂಟ್‌’ಗಳಿಂದ ತುಂಬಿರುತ್ತದೆ. ಇದು ತಲೆನೋವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ದಾಸವಾಳದ ಚಹಾ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.
ಚಹಾ ಮಾಡುವ ವಿಧಾನ
ಮೊದಲಿಗೆ ಐದು ದಾಸವಾಳದ ಹೂವಿನ ದಳಗಳು, 15 ಎಂಎಲ್-ನಿಂಬೆ ರಸ (ರುಚಿಗೆ ಅನುಗುಣವಾಗಿ), 15 ಎಂಎಲ್- ಬ್ರೌನ್ ಶುಗರ್ ಸಿರಪ್, 30 ಎಂಎಲ್ –ನೀರು, ಅಲಂಕರಿಸಲು 4/5 ಪುದೀನಾ ಎಲೆಗಳನ್ನು ತೆಗೆದುಕೊಳ್ಳಿ. ಈ ಚಹಾ ಮಿಶ್ರಣವನ್ನು ಮಾಡಲು, ದಾಸವಾಳದ ಹೂವನ್ನು ತಣ್ಣನೆಯ ನೀರಿನಲ್ಲಿ ತೊಳೆಯಿರಿ. ದಳಗಳನ್ನು ಮಾತ್ರ ತೆಗೆದುಕೊಳ್ಳಿ, ಮೊಗ್ಗುಗಳು ಕಹಿ ರುಚಿಯನ್ನು ಹೊಂದಿರುವುದರಿಂದ ಬಳಸಬಾರದು. 300 ಎಂಎಲ್ ನೀರನ್ನು ಬ್ಲೆಂಡರ್‌’ನಲ್ಲಿ ಹಾಕಿ. ಇದಕ್ಕೆ ದಳಗಳನ್ನು ಸೇರಿಸಿ. ನಯವಾಗಿ ರುಬ್ಬಿಕೊಳ್ಳಿ. ಒಂದು ಗಾಜಿನಲ್ಲಿ ಐಸ್ ಕ್ಯೂಬ್ಸ್ ಹಾಕಿ. ಇದಕ್ಕೆ ದಾಸವಾಳದ ಮಿಶ್ರಣ ಸುರಿಯಿರಿ. ಮೇಲೆ ನಿಂಬೆ ರಸ ಮತ್ತು ಪುದೀನಾ ಚಿಗುರು ಸೇರಿಸಿ. ಒಳ್ಳೆಯ ಪರಿಮಳ ಬರಲು ಬ್ರೌನ್ ಶುಗರ್ ಸಿರಪ್ ಸೇರಿಸಿ.