ತಲೆನೋವಿಗೆ ಮನೆಮದ್ದು

ಸದಾ ಕಾಡುವ ತಲೆನೋವಿಗೆ ನೀವು ಮನೆಯಲ್ಲೇ ಮದ್ದು ಮಾಡಿಕೊಳ್ಳಬಹುದು.

-ಜಾಯಿಕಾಯಿಯ ಪುಡಿಯನ್ನು ಬಿಸಿ ನೀರಲ್ಲಿ ಕಲಸಿ ಸೇವಿಸಿದರೆ ತಲೆನೋವು ಕಡಿಮೆಯಾಗುತ್ತದೆ.

  • ಕೊಬ್ಬರಿ ಎಣ್ಣೆ, ಲವಂಗದ ಎಣ್ಣೆ ಸೇರಿಸಿ ತಲೆಗೆ ಮಸಾಜ್ ಮಾಡಿಕೊಂಡರೆ ತಲೆನೋವು ಕಡಿಮೆಯಾಗುತ್ತದೆ.

-ನಿದ್ದೆ ಮಾಡದೆ ತಲೆನೋವು ಬಂದಿದ್ದರೆ ಬಸಳೆ ಸೊಪ್ಪಿನ ರಸವನ್ನು ಹಣೆಗೆ ಲೇಪ ಮಾಡಬೇಕು. ಆಗ ನಿದ್ದೆ ಚೆನ್ನಾಗಿ ಬರುತ್ತದೆ ಮತ್ತು ತಲೆನೋವು ಗುಣವಾಗುತ್ತದೆ.

-ಪಾಲಾಕ್ ಸೊಪ್ಪಿನ ರಸ ಮತ್ತು ಕ್ಯಾರೆಟ್ ರಸ ಬೆರೆಸಿ ಸೇವಿಸಿದರೆ ಮೈಗ್ರೇನ್ ಕಡಿಮೆಯಾಗುತ್ತದೆ.

-ತಲೆಯಲ್ಲಿನ ರಕ್ತನಾಳಗಳ ಉರಿಯೂತವನ್ನು ತಗ್ಗಿಸಲು ಸಹಾಯ ಮಾಡಿ ತಲೆನೋವನ್ನು ನಿವಾರಿಸುತ್ತದೆ ಶುಂಠಿ. ದಿನವೂ ೨ ರಿಂದ ೩ ಬಾರಿ ೨ ಚಮಚ ಶುಂಠಿ ರಸ ಮತ್ತು ೨ ಚಮಚ ನಿಂಬೆ ರಸವನ್ನು ಮಿಕ್ಸ್ ಮಾಡಿ ಕುಡಿಯಿರಿ.

-ಐಸ್ ಪ್ಯಾಕ್ ಹಾಕಿಕೊಳ್ಳಿ- ಐಸ್‌ನ ತಂಪು ಉರಿಯೂತಗಳಿಂದ ಉಂಟಾಗುವ ತಲೆನೋವನ್ನು ಕಡಿಮೆ ಮಾಡುತ್ತದೆ.

-ಐಸ್ ನೀರಲ್ಲಿ ಅದ್ದಿದ ಟವೆಲ್‌ನ್ನು ತಲೆಗೆ ಪದೇ ಪದೇ ಹಾಕಿಕೊಳ್ಳಿ

-ತುಳಸಿ ಎಲೆಯ ರಸವನ್ನು ಶ್ರೀಗಂಧದ ಪುಡಿ ಜತೆ ಕಲಸಿ ಹಣೆಗೆ ಲೇಪ ಮಾಡಿದರೆ ತಲೆನೋವು ಶಮನವಾಗುತ್ತದೆ.

-೭-೮ ಜಜ್ಜಿದ ತುಳಸಿ ಎಲೆಗಳು ಅಥವಾ ೨-೩ ಹನಿ ತುಳಸಿ ಎಣ್ಣೆಯನ್ನು ಕುದಿಯುವ ನೀರಿಗೆ ಹಾಕಿ ಅದರ ಆವಿಯನ್ನು ತೆಗೆದುಕೊಳ್ಳಬೇಕು.

-ಬಿಸಿಲಿನಲ್ಲಿ ಹೆಚ್ಚು ಒಡಾಡಿ ತಲೆನೋವು ಬಂದರೆ ಬೇವಿನ ಎಣ್ಣೆಯನ್ನು ಹಣೆಗೆ ಹಚ್ಚಬೇಕು.

-ಒಂದು ಹಿಡಿ ಪುದೀನದ ಎಲೆಗಳನ್ನು ತೆಗೆದುಕೊಂಡು ಅದರ ರಸವನ್ನು ತೆಗೆದು ಹಣೆಯಮೇಲೆ ಹಚ್ಚಿಕೊಳ್ಳಿ.

-ಸೀಬೆ ಹಣ್ಣಿನ ಸಿಪ್ಪೆ ಮತ್ತು ಸೀಬೆ ಎಲೆಯನ್ನು ಅರೆದು ಹಣೆಗೆ ಲೇಪ ಮಾಡಿದರೆ ತಲೆನೋವು ಶಮನವಾಗುತ್ತದೆ .

-ಕಫ ಹೆಚ್ಚಾಗಿ ತಲೆ ಭಾರ ಮತ್ತು ತಲೆನೋವಿದ್ದರೆ ಹಿಪ್ಪಲಿ ಪುಡಿ ಮತ್ತು ಹಸಿ ಶುಂಠಿ ರಸವನ್ನು ಬಿಸಿ ನೀರಲ್ಲಿ ಕಲಸಿ ಹಣೆಗೆ ಪಟ್ಟು ಹಾಕಿದರೆ ಕಫ ಕರಗಿ ತಲೆನೋವು ಕಡಿಮೆಯಾಗುತ್ತದೆ.

-ಶೀತದಿಂದ ಮೂಗು ಕಟ್ಟಿ ತಲೆನೋವಿದ್ದರೆ ತುಂಬೆ ಗಿಡದ ಕಾಂಡವನ್ನು ಬಿಸಿ ನೀರಿನಲ್ಲಿ ಕುದಿಸಬೇಕು. ಕುದಿಸುವಾಗ ಬರುವ ಆವಿಯನ್ನು ಮುಖಕ್ಕೆ ತೆಗೆದುಕೊಂಡರೆ ತಲೆನೋವು ಶಮನವಾಗುತ್ತದೆ.

-ಲವಂಗವನ್ನು ಬಿಸಿ ನೀರಲ್ಲಿ ಅರೆದು ಹಣೆಗೆ ಬಿಸಿ ಬಿಸಿ ಲೇಪ ಮಾಡಿದರೆ ಅರೆ ತಲೆನೋವು ಕಡಿಮೆಯಾಗುತ್ತದೆ.

-ಒಂದು ಲೋಟ ನೀರಿಗೆ ೫-೬ ತುಳಸಿ ಎಲೆಗಳನ್ನು ಹಾಕಿ ಕುದಿಸಿ ಅದಕ್ಕೆ ಸ್ವಲ್ಪ ಜೇನನ್ನು ಸೇರಿಸಿ ಕುಡಿಯಿರಿ