ತಲೆಗೆ ಬಡಿದು ಸ್ನೇಹಿತನ ಹತ್ಯೆ

ಕಾಸರಗೋಡು, ನ.೧೭- ತಿರುವನಂತಪುರ ನಿವಾಸಿಯೋರ್ವನನ್ನು ತಲೆಗೆ ಬಡಿದು ಕೊಲೆಗೈದ ಘಟನೆ ರವಿವಾರ ರಾತ್ರಿ ನಡೆದಿದೆ.
ಕೊಲೆಗೀಡಾದವರನ್ನು ತಿರುವನಂತಪುರದ ವಿಜಯನ್ ಮೇಸ್ತ್ರಿ ( ೫೫) ಎಂದು ಗುರುತಿಸಲಾಗಿದೆ. ನಗರ ಹೊರವಲಯದ ಚೆಂಗಳ ಸಂತೋಷ್ ನಗರದ ಬಾಡಿಗೆ ಮನೆಯಲ್ಲಿ ಕೃತ್ಯ ನಡೆದಿದೆ. ಜೊತೆಗಿದ್ದ ತಮಿಳುನಾಡು ಮೂಲದ ಯುವಕನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ವಿಜಯನ್ ಹಾಗೂ ಸ್ನೇಹಿತನ ನಡುವೆ ಉಂಟಾದ ವಾಗ್ವಾದ ಕೊಲೆಗೆ ಕಾರಣವೆನ್ನಲಾಗಿದೆ. ಪಾನಮತ್ತನಾಗಿ ಈ ಕೃತ್ಯ ನಡೆಸಲಾಗಿದೆ ಎಂದು ತಿಳಿದುಬಂದಿದೆ. ವಿದ್ಯಾನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.