ತರೂರು -ಅಖ್ತರ್ ಭೇಟಿ

ಅಬುದಾಬಿ, ಜೂ,೨೭- ದುಬೈ ವಿಮಾನ ನಿಲ್ದಾಣದಲ್ಲಿ ಕೇಂದ್ರದ ಮಾಜಿ ಸಚಿವ ಶಶಿ ತರೂರು ಮತ್ತು ಪಾಕಿಸ್ತಾನದ ವೇಗದ ಬೌಲರ್ ಶೋಯಬ್ ಅಖ್ತರ್ ಅಚಾನಕ್ ಭೇಟಿಯಾಗಿ ಉಭಯ ನಾಯಕರು ಹಲವು ಸಂಗತಿಗಳ ಬಗ್ಗೆ ಚರ್ಚೆ ನಡೆಸಿದರು.

ವಿಮಾನ ನಿಲ್ದಾಣದಲ್ಲಿ ಶೋಯಬ್ ಅಕ್ತರ್ ಅವರ ಭೇಟಿ ಹಲವು ವಿಷಯಗಳ ಕುರಿತು ಅವರೊಂದಿಗೆ ಚರ್ಚೆ ನಡೆಸಿದ್ದೇವೆ. ಅದರಲ್ಲಿಯೂ ಶೋಯಬ್ ಅಕ್ತರ್ ಅವರಿಗೆ ಭಾರತದಲ್ಲಿ ಇರುವ ಅಭಿಮಾನಿಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಶಶಿ ತರೂರು ಟ್ವೀಟ್‌ನಲ್ಲಿ ತಿಳಿಸಿದ್ಧಾರೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಕ್ರಿಕೆಟ್ ಪಂದ್ಯ ಸೇರಿದಂತೆ ವಿವಿಧ ವಿಷಯಗಳು ಈ ವೇಳೆ ಚರ್ಚೆಗೆ ಬಂದವು, ಅದರಲ್ಲಿಯೂ ಭಾರತದಲ್ಲಿ ಅಕ್ತರ್ ಅವರಿಗೆ ಅನೇಕ ಅಭಿಮಾನಿಗಳಿದ್ದಾರೆ ಆ ಬಗ್ಗೆಯೂ ಚರ್ಚೆ ನಡೆಸಿದ್ದೇವೆ ಎಂದಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಅನೇಕ ಭಾರತೀಯರು ಪಾಕಿಸ್ತಾನಿ ಕ್ರಿಕೆಟಿಗನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬಯಸಿದ್ದರು ಎಂದು ಇದೇ ವೇಳೆ ತರೂರು ತಿಳಿಸಿದ್ದಾರೆ.

ದುಬೈ ಮೂಲಕ ದೆಹಲಿಗೆ ಹಿಂದಿರುಗುವಾಗ, ಶೋಯಬ್ ಅಕ್ತರ್ ಅವನ್ನು ಅನಿರೀಕ್ಷಿತವಾಗಿ ಭೇಟಿ ಮಾಡಿದೆ. ಅವರ ಭೇಟಿ ಆಹ್ಲಾದಕರವಾಗಿತ್ತು . ಎಂತಹ ವೇಗದ ಬೌಲರ್ ಎಂದು ಕೊಂಡಾದಿದ್ದಾರೆ.

ಶೋಯೆಬ್ ಅಖ್ತರ್ ಅವರೂ ಕೂಡ ಶಶಿ ತರೂರು ಮಾತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ