ತರೀಕೆರೆ ಕ್ಷೇತ್ರದಲ್ಲಿ ಗೋಷಿಕೃಷ್ಣರವರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಆಗ್ರಹ.


ಸಂಜೆವಾಣಿ ವಾರ್ತೆ
ಹೊಸಪೇಟೆ, ಏ.11: ತರೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ ಎಂ ಗೋಪಿಕೃಷ್ಣ ರವರಿಗೆ ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್ ನೀಡುವಂತೆ ಮಡಿವಾಳ ಸಮಾಜ ಮನವಿ ಮಾಡಿದೆ.
ಈ ಕುರಿತು ಪತ್ರಿಕಾಭವನದಲ್ಲಿ ಮಂಗಳವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು
ಕರ್ನಾಟಕ ರಾಜ್ಯದಲ್ಲಿ ಸುಮಾರು 18 ಲಕ್ಷ ಜನ ಸಂಖ್ಯೆ ಹೊಂದಿರುವ ಮಡಿವಾಳ ಸಮಾಜ ಇದುವರೆಗೂ ಶಾಸಕರಾಗಿ ಆಯ್ಕೆಯಾಗಿ ವಿಧಾನಸೌಧ ಪುವೇಶ ಮಾಡಲು ಆಗದೇ ಇರುವುದು ದುರದೃಷ್ಟದ ಸಂಗತಿ, ತರೀಕರ ಕ್ಷೇತ್ರದಲ್ಲಿ ಸುಮಾರು 14 ವರ್ಷಗಳಿಂದ ಸಮಾಜ ಸೇವೆಯಲ್ಲಿ ನಿರಂತರ ಕಷ್ಟ ಸುಖ, ನೋವು ನಲಿವುಗಳಿಗೆ ಅಲ್ಲಿನ ಜನರಿಗೆ ಸ್ಪಂದಿಸುತ್ತ ಜನನಾಯಕರಾಗಿ ಹೊರಹೊಮ್ಮಿರುವ ಗೋಪಿಕೃಷ್ಣರವರಿಗೆ ಕಳೆದ ಎರಡು ಬಾರಿ ಯಾವುದೇ ಪಕ್ಷ ಟಿಕೇಟ್ ನೀಡದಿದ್ದಕ್ಕೆ ಪಕ್ಷೇತರರಾಗಿ ಸ್ಪರ್ಧಿಸಿ, ಕಡಿಮೆ ಮತಗಳಿಂದ ಪರಾಭವಗೊಂಡಿದ್ದಾರೆ ಎಂದು ಇಡೀ ರಾಜ್ಯದಲ್ಲಿ ಹಿಂದುಳಿದ ವರ್ಗಗಳಲ್ಲಿ ಅತ್ಯಂತ ಹಿಂದುಳಿದ ಜಾತಿ ಮಡಿವಾಳರಾಗಿದ್ದು,ನಮ್ಮ ಸಮಾಜದ ಗೋಪಿಕೃಷ್ಣರವರಿಗೆ ಟಿಕೇಟ್ ನೀಡುವ ಮೂಲಕ ಮಡಿವಾಳ ಸಮಾಜಕ್ಕೆ ಸಾಮಾಜಿಕ ನ್ಯಾಯಾ ಎತ್ತಿಹಿಡಿಯಬೇಕು ಎಂದು ಆಗ್ರಹಿಸಿದರು.
ಯುವ ಘಟಕದ ಜಿಲ್ಲಾಧ್ಯಕ್ಷ ಭರತ್ ಕುಮಾರ ವೆಂಕೋಬಪ್ಪ, ನ್ಯಾಯವಾದಿ ಮರಿಯಪ್ಪ, ಎನ್.ಕೆ.ಹನುಮಂತಪ್ಪ,  ಅಂಬಣ್ಣ ಹಾಜರಿದ್ದರು.

One attachment • Scanned by Gmail