ತರಾತುರಿಯಲ್ಲಿ ಸಮುದಾಯ ಭವನ ಉದ್ಘಾಟನೆಗೆ ವಿರೋಧ

ಚಿಂಚೋಳಿ,ಮಾ.23- ದಲಿತ ಸಂಘಟನೆಗಳು ಸೇರಿದಂತೆ ವಿವಿಧ ಪಕ್ಷಗಳ ಹೋರಾಟದ ಫಲವಾಗಿ ಡಾ.ಅಂಬೇಡ್ಕರ ಸಮುದಾಯ ಭವನಕ್ಕೆ ಜಮೀನು ಮತ್ತು ಅನುದಾನ ಮಂಜೂರಾಗಿರುತ್ತದೆ. ಅಪೂರ್ಣಗೊಂಡ ಈ ಭವನವನ್ನು ತರಾತುರಿಯಿಂದ ಉದ್ಘಾಟನೆ ಮಾಡುತ್ತೀರುವುದಕ್ಕೆ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಆನಂದಕುಮಾರ ಟೈಗರ ಅವರು ಬಲವಾಗಿ ಖಂಡಿಸಿದ್ದಾರೆ.
ಭವನಕ್ಕೆ ನೀರು, ವಿದ್ಯುತ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವ ಕಾಮಗಾರಿ ಪ್ರಗತಿಯಲ್ಲಿದೆ, ಶಾಸಕರ ಸೂಚನೆಯ ಮೇರೆಗೆ ತರಾತೂರಿಯಲ್ಲಿ ಇಂದು ಉದ್ಘಾಟನೆ ಮಾಡಿರುವುದು ಖಂಡನೀಯ, ಅಲ್ಲದೇ ಈ ಕಾರ್ಯಕ್ರಮಕ್ಕೆ ಎಲ್ಲರನ್ನು ಆಹ್ವಾನಿಸದೇ ಇರುವುದು ತಾರತಮ್ಯ ನೀತಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.