ತರಳುಬಾಳು ಯುವಕರ ಸಂಘದಿಂದ ಮಾಸ್ಕ್ ವಿತರಣೆ

 ಹರಿಹರ.ಮೇ.೨೯;  ತಾಲೂಕಿನ  ಸಾಧು ವೀರಶೈವ ಸಮಾಜ, ತರಳುಬಾಳು ಯುವಕರ ಸಂಘ, ತರಳುಬಾಳು ಮಹಿಳಾ ಸಂಘ ಹಾಗೂ ತರಳಬಾಳು ಸೇವಾ ಸಮಿತಿ ಇವರ ಆಶ್ರಯದಲ್ಲಿ ಕೋರೋನಾ ವಾರಿಯರ್ಸ್ ಹಾಗೂ ಕರೋನಾ ಪೇಷಂಟ್   ಸಹಾಯಕರು ಪರಿಚಾರಕರು ನಗರದ ಆಸ್ಪತ್ರೆ  ಹಾಗೂ ಡಿಎಚ್ಒ ಕಚೇರಿಗಳಲ್ಲಿ ಹಾಗೂ ಸದರನ್ ಗ್ಯಾಸ್ ವಿತರಣಾ ಘಟಕದಲ್ಲಿ ಕಾರ್ಯ ನಿರ್ವಹಿಸುವ ಚೆಕ್ ಪೋಸ್ಟ್ ಸಿಬ್ಬಂದಿಗೆ ಸುಮಾರು 400 ರಿಂದ ಐದುನೂರು ಜನಗಳಿಗೆ ಮಧ್ಯಾಹ್ನದ ಊಟದ ಸೇವೆಯನ್ನು ಮಾಡುತ್ತಿರುವ ಕಾರ್ಯಕ್ಕೆ ತಾಲೂಕಿನ  ಶಾಸಕರಾದ ಎಸ್ ರಾಮಪ್ಪ ಸಮಾಜದ ಅಧ್ಯಕ್ಷರ ಕೋರಿಕೆ ಮೇರೆಗೆ ಆಹಾರದ ಕಿಟ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಮಹಾದೇವ ಪ್ಪ.ಎ.ಪಿ.ಎಂ.ಸಿ.ಅಧ್ಯಕ್ಷ ಜಿ.ಮಂಜೂರು ಪಟೇಲ್ .ನಗರಸಭೆ ಸದಸ್ಯ ಅಶ್ವಿನಿ ಕೃಷ್ಣ. ಮಹಿಳಾ ಘಟಕದ ಅದ್ಯಕ್ಷ ಗೀತಮ್ಮ ,ವೀರಣ್ಣ ಕೊಂಡಜ್ಜಿ.ನರೇಂದ್ರ. ಕಿರಣ್ ಕುಮಾರ್ ಇದ್ದರು.