ತರಳಬಾಳು ಹುಣ್ಣಿಮೆ ಮಹೋತ್ಸವ 2023; ಕಲೆ ಪ್ರದರ್ಶಿಸಲು ಸುವರ್ಣಾವಕಾಶ


ಸಂಜೆವಾಣಿ ವಾರ್ತೆ
ಸಂಡೂರು :ಜ:10: ತರಳಬಾಳು ಬೃಹನ್ಮಠದ ಐತಿಹಾಸಿಕ ತರಳಬಾಳು ಹುಣ್ಣಿಮೆ ಮಹೋತ್ಸವ -2023 ಜ.28 ರಿಂದ ಫೆ.5 ವರೆಗೆ ವಿಜಯ ನಗರ ಜಿಲ್ಲೆಯ ಕೊಟ್ಟೂರಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಲೆ ಪ್ರದರ್ಶನಕ್ಕೆ ಪ್ರತಿಭೆಗಳಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಆಸಕ್ತ ಕಲಾವಿದರು ತಮ್ಮ ಪ್ರತಿಭೆಯನ್ನು ವಿಡಿಯೋ ಮಾಡಿ ವಾಟ್ಸಾಪ್ ನಂಬರ್ ಗೆ ಕಳುಹಿಸಬಹುದು.
ಆಯ್ಕೆಯಾದ ಪ್ರತಿಭೆಗಳಿಗೆ ಹುಣ್ಣಿಮೆ ಮಹೋತ್ಸವದಲ್ಲಿ ಬೆಳಗ್ಗೆ ತಮ್ಮ ಕಲೆ ಪ್ರದರ್ಶನಕ್ಕೆ (5 ರಿಂದ 10 ನಿಮಿಷ) ಅವಕಾಶ ಕಲ್ಪಿಸಲಾಗುವುದು. ಸಾರ್ವಜನಿಕರು, ಕಲಾವಿದರು, ವಿದ್ಯಾರ್ಥಿಗಳು ಸಂಗೀತ, ಭರತನಾಟ್ಯ, ಶಾಸ್ತ್ರೀಯ ಸಂಗೀತ, ಕೂಚುಪುಡಿ, ಕಥಕ್ಕಳ್ಳಿ, ಮೋಹನ ಅಟ್ಟಂ, ಜಾನಪದ ನೃತ್ಯದ ಮೂರು ನಿಮಿಷದ ವಿಡಿಯೋ ಕಳುಹಿಸಬಹುದು. ವಿಡಿಯೋವನ್ನು ವಾಟ್ಸಾಪ್ ನಂಬರ್ 9113908422 ಕಳುಹಿಸಬಹುದು. ವಿಡಿಯೋ ಕಳುಹಿಸಲು ಜ.15 ಕೊನೆಯ ದಿನವಾಗಿದೆ ಎಂದು ಬೃಹನ್ಮಠದ ಕಾರ್ಯದರ್ಶಿ ತಿಳಿಸಿದ್ದಾರೆ.