ತರಳಬಾಳು ಶ್ರೀಗಳ ಕಾರ್ಯ ಶ್ಲಾಘನೀಯ

ದಾವಣಗೆರೆ, ಮೇ 19, ನಗರದಲ್ಲಿ ತರಳಬಾಳು ಸೇವಾ ಸಮಿತಿ ಮತ್ತು ಶಿವಸೈನ್ಯ ಯುವಕರ ತಂಡ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಆಶಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿರುವುದು ಹಾಗೂ ಪ್ರತಿನಿತ್ಯ ಕೊರನಾ ರೋಗಕ್ಕೆ ಸಿಲುಕಿದವರಿಗೆ ಮತ್ತು ಅವರ ಅವಲಂಬಿತರಿಗೆ ಊಟದ ವ್ಯವಸ್ಥೆಯನ್ನು ಅವರಿದ್ದಲ್ಲಿಗೇ ಹೋಗಿ ಕೊಡುತ್ತಿರುವುದು ಅತ್ಯಂತ ಪರಿಣಾಮಕಾರಿ ಹಾಗೂ ಪರೋಪಕಾರಿಯಾದುದು ಈ ನಿಟ್ಟಿನಲ್ಲಿ ಕೊರೋನಾ ಮಹಾಮಾರಿಗೆ ಸಿಲುಕಿರುವ ರೋಗಿಗಳಿಗೆ ಮತ್ತು ಸಂತ್ರಸ್ತರಿಗೆ ನೇರವಾಗುತ್ತಿರುವಶ್ರೀತರಳಬಾಳುಜಗದ್ಗುರುಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಕಾರ್ಯ ತುಂಬಾ ಶ್ಲಾಘನೀಯ ಮತ್ತು ಅನನ್ಯವಾದದ್ದು ಎಂದು ಚಿಗಟೇರಿ ಶ್ರೀನಾರದಮುನಿ ದೇವಸ್ಥಾನ ಸೇವಾ ಟ್ರಸ್ಟ್ ನ ಅಧ್ಯಕ್ಷರು, ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷರೂ ಆಗಿರುವ  ಅಣಬೇರುರಾಜಣ್ಣ ಪ್ರಶಂಸೆ ಮಾಡಿದ್ದಾರೆ. ಈ ಕಾರ್ಯವನ್ನು ಮೆಚ್ಚಿ ಸ್ವತಹ ಅಣಬೇರು ರಾಜಣ್ಣನವರು 50 ಸಾವಿರ ರೂಗಳನ್ನು ಮತ್ತು 500 ತೆಂಗಿನ ಕಾಯಿಗಳನ್ನು ಕೊಟ್ಟಿದ್ದಲ್ಲದೆ, ಶ್ರೀ ನಾರದಮುನಿ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ 1 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿರುತ್ತಾರೆ. ಕೊಡುಗೈ ದಾನಿಗಳೆಂದೇ ಹೆಸರಾಗಿರುವ ದಾವಣಗೆರೆ ಮಹಾ ನಗರದ ಮಹಾಜನತೆ ಹಾಗೂ ಗ್ರಾಮೀಣ ಪ್ರದೇಶದ ಜನರು, ಸಂಘ-ಸಂಸ್ಥೆಯವರು ಉದಾರವಾಗಿ ತಮ್ಮಲ್ಲಿರುವ ದವಸ-ಧಾನ್ಯ, ತಾವು ಬೆಳೆದ ತರಕಾರಿ ಹಾಗೂ ಅಡುಗೆಗೆ ಬೇಕಾದ ದಿನಸಿ ಸಾಮಾನುಗಳನ್ನು ಅಥವಾ ನಗದು ರೂಪದಲ್ಲಾದರೂ ಡಾ.ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪ ಹದಡಿ ರಸ್ತೆ, ದಾವಣಗೆರೆ. ಇಲ್ಲಿ ಕೊರೋನಾ ಪೀಡಿತರಿಗೆ ವಿತರಿಸಲು ಅಡುಗೆ ತಯಾರಿಸುತ್ತಿರುವ ಶಿವಸೈನ್ಯ ಯುವಕ ತಂಡ ಹಾಗೂ ತರಳಬಾಳು ಸೇವಾ ಸಮಿತಿ ಇವರಿಗೆ ಸಂದಾಯ ಮಾಡಿ ರಶೀದಿ ಪಡೆದು ಕೊಳ್ಳುವ ಅವಕಾಶವನ್ನು ಕಲ್ಪಿಸಿ ಕೊಡಲಾಗಿದೆ.ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ಅನೇಕ ಜೀವಿಗಳಿಗೆ ಎಲ್ಲರೂ ಸೇರಿ ನೆರವಾಗೋಣ ಎಂದು ಕರೆಕೊಟ್ಟರು.