ತರಳಬಾಳು ಬಡಾವಣೆ ನೌಕರರಿಂದ ಬೆಂಬಲ

 ದಾವಣಗೆರೆ.ಏ.೨೬; ಜಿಲ್ಲಾ ಕಸಾಪ ಅಧ್ಯಕ್ಷ ಅಭ್ಯರ್ಥಿ ಬಿ.ವಾಮದೇವಪ್ಪಗೆ ದಾವಣಗೆರೆ ಮಾಗನೂರು ಬಸಪ್ಪ ಸಮಾಧಿ ಕಟ್ಟೆ ಬಳಗ ಹಾಗೂ ತರಳುಬಾಳು ಬಡಾವಣೆಯ ನಾಗರಿಕರಿಂದ ಬೆಂಬಲ ವ್ಯಕ್ತಪಡಿಸಿದ್ದಾರೆ.ಶತಮಾನದ ಹೊಸ್ತಿಲನ್ನುದಾಟಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆಯಾಗಿ ಬೆಳೆಸುವಲ್ಲಿ ಅಪಾರ ಅನುಭವ, ಗೌರವ, ಶ್ರದ್ಧೆ, ಕಾಳಜಿ, ಬದ್ಧತೆ ಹೊಂದಿರುವ ಕನ್ನಡದ ಪರಿಚಾರಕ ಹಾಗೂ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಕಳೆದ ಮೂರು ದಶಕಗಳಿಂದಲೂ ನಿಕಟ ಸಂಪರ್ಕ ಹೊಂದಿರುವ ಅದರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಸರಳ ಸಜ್ಜನಿಕೆಯ ಕ್ರಿಯಾಶೀಲ, ಮೇರು ವ್ಯಕ್ತಿತ್ವದ ಬಿವಾಮದೇವಪ್ಪನವರನ್ನು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನಾಗಿ ಅತ್ಯಂತ ಬಹುಮತದಿಂದ ಆಯ್ಕೆ ಮಾಡೋಣ ಎಂದು ಮಾಗನೂರು ಬಸಪ್ಪ ಸಮಾಧಿ ಕಟ್ಟೆ ಬಳಗದ ಸದಸ್ಯರು ಹಾಗೂ ತರಳಬಾಳು ಬಡಾವಣೆಯ ಪರಿಷತ್ತಿನ ಆಜೀವ ಸದಸ್ಯ ನಾಗರೀಕಬಂಧುಗಳು ಒಕ್ಕೊರಲಿನಿಂದ ಘೋಷಿಸಿದರು.ದಾವಣಗೆರೆ ತಾಲೂಕು ಅಧ್ಯಕ್ಷರಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಕನ್ನಡ ನುಡಿ ಜಾತ್ರೆಯನ್ನು ಶಾಲಾ ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ, ದತ್ತಿ ಕಾರ್ಯಕ್ರಮಗಳು, ಪ್ರತಿಭಾ ಪುರಸ್ಕಾರ, ಸಾಹಿತ್ಯ ಸಮ್ಮೇಳನಗಳಂತಹ ಕನ್ನಡಪರ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಕನ್ನಡ ನಾಡು -ನುಡಿ, ಜಲ -ನೆಲ, ಕನ್ನಡ ಸಾಹಿತ್ಯದ ಜ್ಞಾನವನ್ನು ಪಸರಿಸಿದ ಕೀರ್ತಿಗೆ ಭಾಜನರಾದವರು ಬಿ.ವಾಮದೇವಪ್ಪನವರು ಎಂದು ಅಲ್ಲಿ ನೆರೆದ ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾಗನೂರು ಬಸಪ್ಪ ಸಮಾಧಿ ಕಟ್ಟೆಯ ಬಳಗದ ಸದಸ್ಯರುಗಳಾದ ಎನ್.ಜಿ.ಪುಟ್ಟಸ್ವಾಮಿ, ಲೋಕಿಕೆರೆ ಕೆಂಚಪ್ಪ, ಮಹೇಶ್ವರಯ್ಯ ಸಿದ್ದನೂರು, ಕೆ.ನಾಗಪ್ಪ, ಕೆಂಚನಗೌಡ್ರ, ಕೆ.ಎಂ.ಶಿವಮೂರ್ತಿ, ಪ್ರೊ.ಎಸ್.ಬಿ.ರಂಗನಾಥ್, ಎ.ಆರ್.ಉಜ್ಜಿನಪ್ಪ, ಡಾ.ಹೆಚ್.ವಿ.ವಾಮದೇವಪ್ಪ, ಕೆ.ಕೊಟ್ರಪ್ಪ, ಬಿ.ಎಂ.ಮುರಿಗಯ್ಯ ಇತರರಿದ್ದರು.