ತರಬೇತಿ, ಮಾರ್ಗದರ್ಶನದ ಸದುಪಯೋಗಕ್ಕೆ ಕರೆ


ಸಂಜೆವಾಣಿ ವಾರ್ತೆ
ಸಂಡೂರು:ಜು: 9:   ಕಾಲೇಜಿನ ವಿದ್ಯಾರ್ಥಿಗಳು ಪದವಿ ನಂತರದಲ್ಲಿ ಮತ್ತು ಪದವಿ ಹಂತದಲ್ಲಿ ಸರ್ಕಾರದಲ್ಲಿ ಅನೇಕ ಹುದ್ದೆಗಳನ್ನು ನೇಮಕಾತಿ ಮಾಡುತ್ತಿದ್ದು ಅದಕ್ಕೆ ಬೇಕಾದ ಉತ್ತಮ ತರಬೇತಿ ಮತ್ತು ಮಾರ್ಗದರ್ಶನ ನೀಡುವಂತಹ ಕಾರ್ಯವನ್ನು ಕಾಲೇಜು ವತಿಯಿಂದ ನಿರಂತರವಾಗಿ ಮಾಡಲಾಗುತ್ತಿದ್ದು ಅದನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಹುಚ್ಚುಸಾಬ್ ತಿಳಿಸಿದರು.
ಅವರು ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಧಾರವಾಡದ  ಗುರುದೇವ ಐ.ಎ.ಎಸ್. ಕೆ.ಎ.ಎಸ್ ಅಕಾಡೆಮಿ ಧಾರವಾಡ ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಬಹಳಷ್ಟು ವಿದ್ಯಾರ್ಥಿಗಳು ಪದವಿ ನಂತರ ಏನು ಎನ್ನುವ ಪ್ರಶ್ನೆ ಕಾಡುತ್ತಿದೆ ಅದಕ್ಕೆ ಉತ್ತರವಾಗಿ ಅವರ ಉನ್ನತ ಶಿಕ್ಷಣದ ಆಯ್ಕೆ, ಅಲ್ಲದೆ ವಿವಿಧ ಹುದ್ದೆಗಳಿಗೆ ಯಾವ ರೀತಿಯಾದ ಅರ್ಜಿಗಳನ್ನು ಸಲ್ಲಿಸಬೇಕು, ಯಾವರೀತಿ ತರಬೇತಿ ಪಡೆದರೆ ಹುದ್ದೆಗಳನ್ನು ಗಿಟ್ಟಿಸಿಕೊಳ್ಳಬಹುದು ಎನ್ನುವ ಮಹತ್ತರ ಮಾಹಿತಿಯನ್ನು ಇಂದು ನೀಡುತ್ತಿದ್ದು ವಿದ್ಯಾರ್ಥಿಗಳು ಅದರ ಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ಲೇಸ್‍ಮೆಂಟ್‍ಸೆಲ್‍ನ ಉಪನ್ಯಾಸಕ ಡಾ. ಎ. ಮಹೇಶ್ ಅವರು ಮಾತನಾಡಿ ಇಂದು ಸ್ಪರ್ಧಾಯುಗದಲ್ಲಿ ಪ್ರತಿಯೊಬ್ಬರೂ ಸಹ ನಿರಂತರ ಪ್ರಯತ್ನ ಮಾಡಿದಾಗ ಯಶಸ್ಸು ತಮ್ಮದಾಗುತ್ತದೆ, ಅದ್ದರಿಂದ ಧಾರವಾಡದಿಂದ ವಿವಿಧ ಸ್ಪರ್ಧೆಗಳಲ್ಲಿ ಯಾವ ರೀತಿ ಭಾಗವಹಿಸಬೇಕು, ಅಲ್ಲದೆ ಯಾವೆಲ್ಲ ಹುದ್ದೆಗಳನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ತಿಳಿಸುವ ಮಹತ್ತರ ಕಾರ್ಯ ಇದಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡಸಿಕೊಳ್ಳಬೇಕು ಎಂದರು.
ಮುಖ್ಯ ತರಬೇತಿ ದಾರರಾಗಿ ಧಾರವಾಡದ ಗುರುದೇವ ಐ.ಎ.ಎಸ್. ಮತ್ತು ಕೆ.ಎ.ಎಸ್. ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಆಕಾಡೆಮಿಯ ಶಂಕರ್ ಹೆಚ್. ಆಡಳಿತಾಧಿಯಿವರು ಮಾಹಿತಿ ನೀಡಿ ಇಂದು ಎಲ್ಲಾ ಹುದ್ದೆಗಳನ್ನು ಪರೀಕ್ಷೆಗಳ ತಯಾರಿ ಮತ್ತು ಅಭ್ಯಾಸದ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಡಾ. ಹುಚ್ಚುಸಾಬ್, ಪ್ಲೆಸೆ ಮೆಂಟ್ ಅಧಿಕಾರಿ ಡಾ. ಎ. ಮಹೇಶ್, ವಾಣಿಜ್ಯ ಶಾಸ್ತ್ರ ವಿಭಾಗದ ಕಿಶೋರ್, ದೈಹಿಕ ಶಿಕ್ಷಣ ವಿಭಾಗದ ಉಪನ್ಯಾಸಕ ನರಸಪ್ಪ ವಾಣಿಜ್ಯ, ಕಲಾ, ವಿಜ್ಞಾನ ವಿಭಾಗಗಳ ಅಂತಿಮ ವರ್ಷದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.